ಹರಿಹರದಲ್ಲಿ ಇಂದು ಧರ್ಮ ಜಾಗೃತಿ ಸಮಾರಂಭ

ಹಳೇಪೇಟೆ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಇಂದು ಸಂಜೆ 6 ಗಂಟೆಗೆ ಬಾಳೆಹೊನ್ನೂರು ಶ್ರೀ ಮದ್ರಂಭಾಪುರಿ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯ ವಹಿಸಲಿದ್ದಾರೆ. ಹರಪನಹಳ್ಳಿ ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕಿ ಲತಾ ಮಲ್ಲಿಕಾರ್ಜುನ್, ಅಖಿಲ ಭಾರತ ವೀರಶೈವ ಮಹಾಸಭಾ ಹರಿಹರ ತಾಲ್ಲೂಕು ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ಮಲೇಬೆನ್ನೂರು ರೇಣುಕಾ ರೈಸ್‌ಮಿಲ್‌ನ ಬಿ.ಎಂ. ವಾಗೀಶಸ್ವಾಮಿ, ಹಳೇಬಾತಿ ತಪೋವನದ ಛೇರ್ಮನ್ ಶಶಿಕುಮಾರ್ ಮೆಹರ್ವಾಡೆ, ಹಳೆ ಹರ್ಲಾಪುರ ಕಾಂಗ್ರೆಸ್ ಮುಖಂಡ ಬಿ. ಹಾಲೇಶಗೌಡ, ಹರಿಹರ ವೀರಶೈವ ಸಮಾಜದ ಮುಖಂಡ ಕೊಂಡಜ್ಜಿ ಈಶ್ವರಪ್ಪ ಭಾಗವಹಿಸಲಿದ್ದಾರೆ.   

error: Content is protected !!