ಇಂದಿರಾ ಕ್ಯಾಂಟಿನ್‌ : ಅಭಿಪ್ರಾಯ ಸಂಗ್ರಹಿಸಿದ ಎಸಿ

ಇಂದಿರಾ ಕ್ಯಾಂಟಿನ್‌ : ಅಭಿಪ್ರಾಯ ಸಂಗ್ರಹಿಸಿದ ಎಸಿ

ಮಲೇಬೆನ್ನೂರು, ಜು.1- ಪಟ್ಟಣದ ಜಿಬಿಎಂ ಶಾಲೆಯ ಆವರಣದಲ್ಲಿ ಶಾಲಾ ಕೊಠಡಿಗಳನ್ನು ಒಡೆದು ಇಂದಿರಾ ಕ್ಯಾಂಟಿನ್‌ ನಿರ್ಮಾಣ ಮಾಡುವ ಸ್ಥಳಕ್ಕೆ ಸೋಮವಾರ ಉಪ ವಿಭಾಗಾಧಿಕಾರಿ ಶ್ರೀಮತಿ ಎನ್. ದುರ್ಗಾಶ್ರೀ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಇಡೀ ಶಾಲೆಯಲ್ಲಿ 12 ಮಕ್ಕಳು ಮಾತ್ರ ಇರುವ ಬಗ್ಗೆ ಮಾಹಿತಿ ಬಹಿರಂಗಗೊಂ ಡಿತು. ಇದಕ್ಕೂ ಮುನ್ನ ಪುರಸಭೆ ಸಭಾಂಗಣದಲ್ಲಿ ಪುರಸಭೆ ಸದಸ್ಯರ ಮತ್ತು ಸಾರ್ವಜನಿಕರ ಸಭೆ ನಡೆಸಿ, ಪಟ್ಟಣದ ಜಿಬಿಎಂ ಶಾಲೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್‌ ನಿರ್ಮಾಣ ಮಾಡುವ ಕುರಿತು ಅಭಿಪ್ರಾಯ ಸಂಗ್ರಹಿಸಿದರು.

ಸಭೆಯ ಆರಂಭದಲ್ಲಿ ಎಸಿ ಸೂಚನೆ ಮೇರೆಗೆ ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್‌ ಅವರು ಪುರಸಭೆ ಸದಸ್ಯರನ್ನು ಹೊರತು ಪಡಿಸಿ ಎಲ್ಲರೂ ಹೊರನಡೆಯುವಂತೆ ಸೂಚಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಉಪಸ್ಥಿತ ನಾಗರಿಕರು ಸಭೆಯ ಔಚಿತ್ಯ ಪ್ರಶ್ನಿಸಿ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಮುಂದಾದರು. ತಕ್ಷಣ ಎಚ್ಚೆತ್ತ ಎಸಿ ದುರ್ಗಾಶ್ರೀ ಅವರು, ಎಲ್ಲರನ್ನೂ ಸಮಾ ಧಾನ ಪಡಿಸಿ ಅಭಿಪ್ರಾಯ ಕೇಳಿದರು.

ಜಿಬಿಎಂ ಶಾಲೆಯ ಆವರಣದಲ್ಲಿ ಶಿಥಿಲ ಗೊಂಡಿರುವ ಕೊಠಡಿಗಳನ್ನು ತೆಗೆದು ಸಾರ್ವ ಜನಿಕರಿಗೆ ಅನುಕೂಲವಾಗುವ ಇಂದಿರಾ ಕ್ಯಾಂ ಟೀನ್‌ ನಿರ್ಮಿಸುವಂತೆ ಪುರಸಭೆ ಸದಸ್ಯರಾದ ನಯಾಜ್‌, ಸಾಬೀರ್, ದಾದಾ ಪೀರ್, ಭೋವಿಕುಮಾರ್‌, ಕೆ.ಪಿ.ಗಂಗಾಧರ್,‌ ಭಾನುವಳ್ಳಿ ಸುರೇಶ್, ಎಂ.ಬಿ.ರುಸ್ತುಂ, ಪೂಜಾರ್ ಬೀರಪ್ಪ, ಪೂಜಾರ್ ಗಂಗಾಧರ್ ಸೇರಿದಂತೆ ಇನ್ನೂ ಅನೇಕರು ಆಗ್ರಹಿಸಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಮಾತನಾಡಿ, ಜಿಬಿಎಂ ಶಾಲೆ ಜಾಗವನ್ನು ಪ್ರಥಮ ದರ್ಜೆ ಕಾಲೇಜಿಗೆ ಮೀಸಲಿಡಿ. ಇಂದಿರಾ ಕ್ಯಾಂಟಿನ್ ಅನ್ನು ಬೇರೆ ಸ್ಥಳದಲ್ಲಿ ನಿರ್ಮಿಸಿ ಎಂದರು. 

ಶಾಲೆಗೆ ಜಮೀನು ನೀಡಿದ ದೇಶಪಾಂಡೆ ಮನೆತನದ ಕಾರ್ಯ ಶ್ಲ್ಯಾಘಿಸಿದರು. ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಜಿಬಿಎಂ ಶಾಲೆ ಆವರಣದಲ್ಲಿ ಬೇಡ ಎಂದು ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್‌, ಮುದೇಗೌಡ್ರ ತಿಪ್ಪೇಶ್‌, ಕೆ.ಜಿ.ಮಂಜುನಾಥ್‌, ಓ.ಜಿ.ಮಂಜು, ಓ.ಜಿ.ಕುಮಾರ್‌, ಎಸ್‌ಡಿಎಂಸಿ ಅಧ್ಯಕ್ಷ ಅಜಯ್‌ ನಾಯ್ಕ್‌ ಮತ್ತು ಬೆಣ್ಣೆಹಳ್ಳಿ ಬಸವರಾಜ್ ಅಧಿಕಾರಿಗಳಿಗೆ ಮನವಿ ಮಾಡಿದರು.

ಸುರೇಶ್‌ ಶಾಸ್ತ್ರಿ ಮಾತನಾಡಿ, ಶಿಕ್ಷಣಕ್ಕಾಗಿ ದಾನ ನೀಡಿರುವ ಜಾಗದಲ್ಲಿ ಇಂದಿರಾ ಕ್ಯಾಂ ಟೀನ್‌ ನಿರ್ಮಿಸಲು ಮುಂದಾದರೆ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ತಹಶೀಲ್ದಾರ್‌ ಗುರುಬಸವರಾಜ್‌ ಮಾತ ನಾಡಿ, ಸಮಸ್ಯೆಯನ್ನು ದೊಡ್ಡದು ಮಾಡುವುದು ಬೇಡ. ಎಲ್ಲರೂ ಸಾಮರಸ್ಯದಿಂದ ಇದ್ದು ಸಹಕಾರ ನೀಡಿ ಎಂದು ಮನವಿ ಮಾಡಿದರು. 

ಎಲ್ಲರ ಅಭಿಪ್ರಾಯ ಆಲಿಸಿದ ಎಸಿ ದುರ್ಗಾಶ್ರೀ ಅವರು, ಇಂದಿನ ಸಭೆಯ ಎಲ್ಲಾ ಮಾಹಿತಿಯನ್ನು ಜಿಲ್ಲಾಧಿಕಾರಿ ಅವರಿಗೆ ನೀಡುತ್ತೇವೆ. ಈ ಕುರಿತು ಅವರೇ ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದರು. 

ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್‌, ಉಪ ತಹಶೀಲ್ದಾರ್‌ ಆರ್.ರವಿ, ಕಂದಾಯ ನಿರೀಕ್ಷಕ ಆನಂದ್‌, ಗ್ರಾಮಲೆಕ್ಕಾಧಿಕಾರಿ  ಅಣ್ಣಪ್ಪ, ಪುರಸಭೆ ಕಂದಾಯಾಧಿಕಾರಿ ಪ್ರಭು, ಪರಿಸರ ಇಂಜಿನಿಯರ್ ಉಮೇಶ್, ಆರೋಗ್ಯ ನಿರೀಕ್ಷಕ ನವೀನ್‌, ಸಮುದಾಯ ಸಂಘಟನಾ ಧಿಕಾರಿ ದಿನಕರ್‌ ಮತ್ತು ನಾಗರಿಕರು, ಹಳೇ ವಿದ್ಯಾರ್ಥಿಗಳು ಸಭೆಯಲ್ಲಿದ್ದರು.

error: Content is protected !!