ಆರ್ಕಿಯಾದಲ್ಲಿ ಹೈಡ್ರೋಜನ್ ಆರ್ಥಿಕತೆಯ ಶೋಧ

ಆರ್ಕಿಯಾದಲ್ಲಿ ಹೈಡ್ರೋಜನ್ ಆರ್ಥಿಕತೆಯ ಶೋಧ

ಸಿಡ್ನಿ, ಜೂ. 30 – ವಿಶ್ವದ ಮುಕ್ಕಾಲು ಭಾಗದಷ್ಟು ದ್ರವ್ಯ ಹೈಡ್ರೋಜನ್‌ನಿಂದ ರೂಪುಗೊಂಡಿದೆ. ಭೂಮಿ ಸಹ ಆರಂಭಿಕ ಘಟ್ಟದಲ್ಲಿ ಹೈಡ್ರೋಜನ್‌ನಿಂದ ಸಮೃದ್ಧವಾಗಿತ್ತು. 

ನಕ್ಷತ್ರಗಳಲ್ಲಿರುವ ಹೈಡ್ರೋಜನ್ ಅಣು ಪ್ರಕ್ರಿಯೆಗೆ ಒಳಗಾಗಿ ಬಿಸಿ ಹಾಗೂ ಬೆಳಕು ಉತ್ಪತ್ತಿಯಾಗುತ್ತದೆ.

ಭೂಮಿಯ ಮೇಲೆ ಆರಂಭಿಕ ದಿನಗಳಲ್ಲಿದ್ದ ಜೀವ ಸ್ವರೂಪಗಳಾದ ಆರ್ಕಿಯಾಗಳು ಹೈಡ್ರೋಜನ್ ಅವಲಂಬಿಸಿದ್ದವು. ಇವುಗಳನ್ನು 1970ರಲ್ಲಷ್ಟೇ ಪತ್ತೆ ಮಾಡಲು ಸಾಧ್ಯವಾಗಿತ್ತು.

ಶತಕೋಟಿ ವರ್ಷಗಳ ಹಿಂದೆ ಭೂಮಿಯ ಸ್ವರೂಪ ವೇಗವಾಗಿ ಬದಲಾಗುತ್ತಿತ್ತು. ಇಂತಹ ಬದಲಾವಣೆಗಳಯ ನಡುವೆಯೂ ಆರ್ಕಿಯಾಗಳು ಬದುಕುಳಿದಿದ್ದವು. ಇದು ವಿಜ್ಞಾನಿಗಳ ಕುತೂಹಲ ಹಾಗೂ ಅಧ್ಯಯನಕ್ಕೂ ಕಾರಣವಾಗಿದೆ.

ಆರ್ಕಿಯಾಗಳು ವಿಶೇಷ ಕಿಣ್ವಗಳನ್ನು ಹೊಂದಿ ರುತ್ತಿದ್ದವು. ಇವುಗಳು ಹೈಡ್ರೋಜನ್ ಅನಿಲದಿಂದ ಶಕ್ತಿ ಪಡೆಯುತ್ತಿದ್ದವು ಎಂಬುದು ಪತ್ತೆಯಾಗಿದೆ ಎಂದು ಮೊನಾಶ್ ಯೂನಿವರ್ಸಿಟಿಯ ಪೋಕ್ ಮ್ಯಾನ್ ಲ್ಯೂಂಗ್ ಹಾಗೂ ಕ್ರಿಸ್ ಗ್ರೀನಿ ತಿಳಿಸಿದ್ದಾರೆ. ಅವರ ಅಧ್ಯಯನವು ಸೆಲ್ ಅಂಡ್ ನೇಚರ್ ಕಮ್ಯು ನಿಕೇಷನ್ಸ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಹೈಡ್ರೋಜನ್ ಆಧರಿತ ಜೀವನ : ಬೇರೆ ಯಾವುದೇ ಜೀವಿಯೂ ಬದುಕಲಾಗದ ಸ್ಥಳದಲ್ಲಿ ಆರ್ಕಿಯಾಗಳು ನೆಲೆಸಿದ್ದವು. ಕೆಲವು ಕಬ್ಬಿಣವನ್ನೇ ಕರಗಿಸುವಷ್ಟು ಆಸಿಡ್ ಅಂಶ ಹೊಂದಿರುವ ಕುದಿಯುವ ಚಿಲುಮೆಗಳಲ್ಲೂ ಬದುಕಿದ್ದವು.

ಭೂಗರ್ಭದಲ್ಲಿನ ಪ್ರಕ್ರಿಯೆಗಳ ಕಾರಣದಿಂದಾಗಿ ಈ ಚಿಲುಮೆಗಳಲ್ಲಿ ಹೈಡ್ರೋಜನ್ ನಿರಂತರವಾಗಿ ಉತ್ಪಾದನೆಯಾಗುತ್ತಿತ್ತು. ಆರ್ಕಿಯಾಗಳು ಈ ಹೈಡ್ರೋಜನ್ ಹೀರಿ ತಮ್ಮ ದೇಹವನ್ನು ರಿಪೇರಿ ಮಾಡಿಕೊಳ್ಳುತ್ತಿದ್ದವು. ಇಂತಹ ಕಠಿಣ ಪರಿಸ್ಥಿತಿಗಳಲ್ಲೂ ಅವುಗಳು ಬೆಳೆಯುತ್ತಿದ್ದವು.

ಗಾಳಿಯಲ್ಲಿದ್ದ ಅತ್ಯಲ್ಪ ಪ್ರಮಾಣದ ಹೈಡ್ರೋಜನ್ ಬಳಸಿಕೊಂಡೇ ಕೆಲ ಆರ್ಕಿಯಾಗಳು ಹೆಚ್ಚುವರಿ ಆಹಾರ ಪಡೆಯುತ್ತಿದ್ದವು. ಇದರಿಂದಾಗಿ ಒಂದು ಹೈಡ್ರೋಜನ್ ಚಿಲುಮೆಯಿಂದ ಮತ್ತೊಂದು ಚಿಲುಮೆಗೆ ಹೋಗಲೂ ಸಾಧ್ಯವಾಗುತ್ತಿತ್ತು.

ಕತ್ತಲಲ್ಲೂ ಜೀವನ : ಕೆಲ ಆರ್ಕಿಯಾಗಳು ಭೂಮಿಯ ಕೆಳಗೂ ನೆಲೆ ಕಂಡುಕೊಂಡಿದ್ದವು. ಆಕ್ಸಿಜನ್ ಇಲ್ಲದ ಇಂತಹ ಜಾಗದಲ್ಲಿ ಯಾವುದೇ ಜೀವಿ ಇರಲು ಸಾಧ್ಯವಾಗುತ್ತಿರಲಿಲ್ಲ.

ಆದರೆ, ಆರ್ಕಿಯಾಗಳು ಭೂಮಿಯಲ್ಲಿನ ಸಾವ ಯವ ಅಂಶಗಳಿಂದ ಬದುಕಲು ಅಗತ್ಯವಾದ ಆಹಾರ ಪಡೆಯುತ್ತಿದ್ದವು. ಸಾವಯವ ಪದಾರ್ಥಗಳನ್ನು ಹುದುಗಿಸಿ ಹೈಡ್ರೋಜನ್ ಪಡೆಯುತ್ತಿದ್ದವು. ಇದರಿಂದ ಸಿಗುವ ಅತ್ಯಲ್ಪ ಆಹಾರವನ್ನೇ ಅವಲಂಬಿಸಿರುತ್ತಿದ್ದವು. ಕೆಲ ಆರ್ಕಿಯಾಗಳ ಕಣಗಳು ಅತಿ ಚಿಕ್ಕವಾಗಿರುತ್ತಿದ್ದವು. ಇದರಿಂದ ಅವುಗಳ ಆಹಾ ರದ ಅಗತ್ಯವೂ ಕಡಿಮೆ ಇರುತ್ತಿತ್ತು. ಇನ್ನೂ ಕೆಲವು ಪರಾವಲಂಬಿ ಜೀವಿಗಳಾಗಿಯೂ ಬದುಕುತ್ತಿದ್ದವು.

ಇನ್ನು ಕೆಲ ಆರ್ಕಿಯಾಗಳು ಪ್ರಾಣಿಗಳ ಕರುಳಿನಲ್ಲೇ ಮನೆ ಮಾಡಿಕೊಂಡಿವೆ. ಮಿಥನೊಜೀನ್ ಎಂದು ಕರೆಯಲಾಗುವ ಈ ಆರ್ಕಿಯಾಗಳು ಹೈಡ್ರೋಜನ್ ತಿನ್ನುತ್ತವೆ ಹಾಗೂ ಮಿಥೇನ್ ಅನಿಲ ಹೊರ ಹಾಕುತ್ತವೆ.

ರಾಸುಗಳ ಕರುಳುಗಳಲ್ಲಿ ಮಿಥನೊಜೀನ್‌ ಗಳು ಹೇರಳವಾಗಿವೆ. ಇವುಗಳು ದೊಡ್ಡ ಪ್ರಮಾಣ ದಲ್ಲಿ ಮಿಥೇನ್ ಹೊರ ಹಾಕಲು ಕಾರಣವಾಗುತ್ತಿವೆ. ಜಾಗತಿಕ ತಾಪಮಾನ ಹೆಚ್ಚಳಕ್ಕೆ ಮಿಥೇನ್ ಸಹ ಪ್ರಮುಖ ಕಾರಣವಾಗಿದೆ. ವಿಜ್ಞಾನಿಗಳು ಮಿಥೇನ್ ಹೊರ ಸೂಸುವಿಕೆ ಕಡಿಮೆ ಮಾಡುವ ಬಗ್ಗೆ ಗಂಭೀರ ಅಧ್ಯಯನ ನಡೆಸುತ್ತಿದ್ದಾರೆ.

ಆಧುನಿಕ ಜಗತ್ತು ಪಳಿಯುಳಿಕೆ ಇಂಧನದಿಂದ ದೂರವಾಗುವ ಪ್ರಯತ್ನದಲ್ಲಿದೆ. ಹೀಗಾಗಿ ಆರ್ಕಿಯಾಗಳ ಬದುಕಿನಿಂದ ಸಾಕಷ್ಟು ಕಲಿಯಲು ಅವಕಾಶವಿದೆ. ಶತಕೋಟಿಗಟ್ಟಲೆ ವರ್ಷಗಳಿಂದ ಆರ್ಕಿಯಾಗಳು ನೆಲೆ ಕಂಡುಕೊಂಡಿವೆ.

ಭೂಮಿಯಲ್ಲಿನ ಸಾಕಷ್ಟು ಹೈಡ್ರೋಜನ್ ನೀರಿನ ಸ್ವರೂಪದಲ್ಲಿದೆ. ನೀರಿನಿಂದ ಹೈಡ್ರೋಜನ್ ಹೊರ ತೆಗೆಯುವುದು ಈಗ ದುಬಾರಿಯಾಗಿದೆ. ಜೈವಿಕ ಹೈಡ್ರೋಜನ್ ವೇಗವರ್ಧಕಗಳ ಮೂಲಕ ವೆಚ್ಚ ಕಡಿಮೆಯಾಗುವ ಸಾಧ್ಯತೆ ಇದೆ. ಆರ್ಕಿಯಾಗಳು ಹೆಚ್ಚು ದಕ್ಷತೆಯಿಂದ ಹೈಡ್ರೋಜನ್ ಉತ್ಪಾದಿಸುವ ಮೂಲಕ ಆರ್ಥಿಕತೆಗೆ ನೆರವಾಗುವ ಸಾಧ್ಯತೆ ಇದೆ.

error: Content is protected !!