ಸರ್ಕಾರದ 6ನೇ ಗ್ಯಾರಂಟಿಯೇ ಬೆಲೆ ಏರಿಕೆ

ಸರ್ಕಾರದ 6ನೇ ಗ್ಯಾರಂಟಿಯೇ ಬೆಲೆ ಏರಿಕೆ

ಉಮಾ ವ್ಯಂಗ್ಯ

ದಾವಣಗೆರೆ, ಜೂ.28- ಪಂಚ ಗ್ಯಾರಂಟಿಗಳ ಜತೆಗೆ ಬೆಲೆ ಏರಿಕೆಯು ಸರ್ಕಾರದ 6ನೇ ಗ್ಯಾರಂಟಿಯಾಗಿದೆ ಎಂದು ಮಾಜಿ ಮೇಯರ್‌ ಉಮಾ ಪ್ರಕಾಶ್‌ ವ್ಯಂಗ್ಯವಾಡಿದ್ದಾರೆ.

ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆ ಕೊಡುತ್ತಿರುವ ಕಾಂಗ್ರೆಸ್‌ ಸರ್ಕಾರವು ಮನೆ ಕಂದಾಯ, ನೀರಿನ ಕಂದಾಯ, ಸ್ಟಾಂಪ್ ಶುಲ್ಕ, ಅಬಕಾರಿ ಸುಂಕ, ಪೆಟ್ರೋಲ್, ಡೀಸೆಲ್ ಬೆಲೆ ಮತ್ತು ಹಾಲಿನ ದರ ಹೆಚ್ಚಳ ಮಾಡುವ ಮೂಲಕ 6ನೇ ಗ್ಯಾರಂಟಿಯಾಗಿ ಜನರಿಂದ ವಾಪಸ್‌ ಹಣ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರ ನಡೆಸುವವರು ತೊಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಬಡವರಿಗಷ್ಟೇ ಗ್ಯಾರಂಟಿ ಯೋಜನೆ ಕೊಡುವುದನ್ನು ಬಿಟ್ಟು, ಅನುಕೂಲಸ್ಥರಿಗೂ ಸರ್ಕಾರದ ಪುಕ್ಕಟೆ ಯೋಜನೆ ನೀಡಿ ಸರ್ಕಾರದ ಬೊಕ್ಕಸ ಖಾಲಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಈಗ ಬೊಕ್ಕಸ ತುಂಬಿಕೊಳ್ಳಲು ಬೆಲೆ ಏರಿಕೆ ಎಂಬ 6ನೇ ಗ್ಯಾರಂಟಿಯನ್ನು ಚುನಾವಣೆ ಮುಂಚೆ ಘೋಷಿಸದೇ ಇಂದು ಬೆಲೆ ಏರಿಕೆ ಮಾಡುತ್ತಿದ್ದಾರೆ. 

ರಾಜ್ಯದ ಜನತೆ ಇನ್ನೂ ಯಾವ-ಯಾವ ಬೆಲೆ ಏರಿಕೆ ಮಾಡುತ್ತಾರೆ ಎಂದು 6ನೇ ಗ್ಯಾರಂಟಿಯ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

error: Content is protected !!