ಕೆರೆ ಭರ್ತಿ: ಮಲ್ಲಶೆಟ್ಟಿಹಳ್ಳಿ ಗ್ರಾಮಸ್ಥರ ಸಂತಸ

ಕೆರೆ ಭರ್ತಿ: ಮಲ್ಲಶೆಟ್ಟಿಹಳ್ಳಿ ಗ್ರಾಮಸ್ಥರ ಸಂತಸ

ದಾವಣಗೆರೆ, ಜು. 28-  ಮಲ್ಲಶೆಟ್ಟಿ ಹಳ್ಳಿ ಬಳಿಯ ಕೆರೆ ತುಂಬಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಾಯಕೊಂಡ ಶಾಸಕ ಬಸವಂತಪ್ಪ ಮಲ್ಲಶೆಟ್ಟ ಹಳ್ಳಿ ಬಳಿಯ ಜಾಕ್‌ವೆಲ್‌ಗೆ ಭೇಟಿ ನೀಡಿ ಬರಿದಾಗಿರುವ ಕೆರೆಗೆ ನೀರು ತುಂಬಿಸುವ ಕುರಿತು ಅಧಿಕಾರಿ ಗಳಿಗೆ ತಾಕೀತು ಮಾಡಿದ್ದರು. ಈ ವರದಿ ಜನತಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.

ವರದಿ ಪ್ರಕಟಗೊಂಡ ಮರುದಿನವೇ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು, ಕೆರೆಗೆ ನೀರು ಹರಿದು ಬಂದಿದೆ.  ಮಲ್ಲಶೆಟ್ಟಿ ಹಳ್ಳಿಯ ಅವಿನಾಶ್ ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

error: Content is protected !!