ಮಲೇಬೆನ್ನೂರು : ವಿವಿಧೆಡೆಯಲ್ಲಿ ಯೋಗ ದಿನಾಚರಣೆ

ಮಲೇಬೆನ್ನೂರು : ವಿವಿಧೆಡೆಯಲ್ಲಿ ಯೋಗ ದಿನಾಚರಣೆ

ಮಲೇಬೆನ್ನೂರು, ಜೂ. 21- ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಇಲ್ಲಿನ ನೀರಾವರಿ ಇಲಾಖೆಯ ಮುಂಭಾಗದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಹಮಿಕೊಂಡಿದ್ದ 9ನೇ ವರ್ಷದ  ವಿಶ್ವ ಯೋಗ ಕಾರ್ಯಕ್ರಮವನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಪುರಸಭೆ ಸದಸ್ಯ ಗೌಡ್ರ ಮಂಜಣ್ಣ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಸಂಘಟಕರಾದ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗಾಭ್ಯಾಸವನ್ನು ಒಂದು ದಿನ ಮಾಡಿದರೆ ಸಾಲದು, ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆ ಯೋಗಾಭ್ಯಾಸ ಮಾಡಿ ಬದುಕನ್ನು ಸುಂದರವಾಗಿಸಿಕೊಳ್ಳಿ ಎಂದರು.

ನಿವೃತ್ತ ಶಿಕ್ಷಕ ಡಿ. ರವೀಂದ್ರಪ್ಪ ಮಾತನಾಡಿ, ಯೋಗ ಮಾಡುವುದರಿಂದ ಆರೋಗ್ಯ ಅಷ್ಟೇ ಅಲ್ಲ, ನಮ್ಮ ಉತ್ಸಾಹವನ್ನೂ ಹೆಚ್ಚಿಸಿ, ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುತ್ತದೆ ಎಂದರು.

ಇನ್ನೋರ್ವ ನಿವೃತ್ತ ಶಿಕ್ಷಕ ಜಿ.ಆರ್. ನಾಗರಾಜ್ ಮಾತನಾಡಿ, ಜಗತ್ತಿನಲ್ಲಿ ಅತಿ ವೇಗವಾಗಿ ಓಡುವುದು ಮನಸ್ಸು. ಅಂತಹ ವೇಗದ ಮನಸ್ಸನ್ನು ನಿಯಂತ್ರಿಸುವ ಶಕ್ತಿ ಯೋಗಕ್ಕೆ ಇದೆ ಎಂದರು.

ಪತ್ರಕರ್ತ ಜಿಗಳಿ ಪ್ರಕಾಶ್ ಮಾತನಾಡಿ, ಯೋಗ ಪ್ರತಿಯೊಬ್ಬರ ಬದುಕಿನ ಭಾಗವಾಗಬೇಕೆಂದರು.

ಕರಾಟೆ ತರಬೇತುದಾರ ಪಾಂಡುರಂಗ ಮಾತನಾಡಿ, ಆರೋಗ್ಯಕ್ಕಾಗಿ ನಾವು ತೆಗೆದುಕೊಳ್ಳುವ ಮಾತ್ರೆ ಕ್ಷಣಿಕವಾಗಿದ್ದು, ಯೋಗಾಭ್ಯಾಸ ಬದುಕಿನ ಕೊನೆ ಕ್ಷಣದವರೆಗೂ ರಕ್ಷಾ ಕವಚವಾಗಿರುತ್ತದೆ ಎಂದು ಪ್ರತಿಪಾದಿಸಿದರು.

ಬಸವ ಬಳಗದ ಅಧ್ಯಕ್ಷ ವೈ. ನಾರೇಶಪ್ಪ, ಅಕ್ಕನ ಬಳಗದ ಶ್ರೀಮತಿ ವನಜಾಕ್ಷಮ್ಮ ಹಾಲೇಶಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್ ಮಾತನಾಡಿದರು.

ಈ ವೇಳೆ ರಾಷ್ಟ್ರೀಯ ಯೋಗ ಪಟು
ಕು.  ಮಾನ್ಯ ಅವರು ವಿವಿಧ ಭಂಗಿಯ ಯೋಗ ಮಾಡಿ ಎಲ್ಲರ ಗಮನ ಸೆಳೆದರು.

ಪತಂಜಲಿಯ ಕೆ.ಜಿ. ನಾಗರಾಜ್, ವಿಜಯ ಟೈರ್ಸ್‌ನ ಬೇಬಿಜಾನ್, ಕುಂಬಳೂರು ನಿರಂಜನ್, ಯೋಗಪಟುಗಳಾದ ವೈಷ್ಣವಿ, ಗೀತಾ, ಐಶ್ವರ್ಯ, ಅಕ್ಕನ ಬಳಗದ ಗೌಡ್ರು ಮಂಗಳಮ್ಮ, ಪ್ರೇಮ, ಸುನಂದ, ರತ್ನಮ್ಮ, ರಾಜೇಶ್ವರಿ, ಶಾರದಮ್ಮ, ನಾಗಮ್ಮ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪಿಡಬ್ಲ್ಯೂಡಿ ಸರ್ಕಾರಿ ಶಾಲೆಯಲ್ಲಿ ಜರುಗಿದ ಯೋಗ ದಿನಾಚರಣೆಯಲ್ಲಿ ದೈಹಿಕ ಶಿಕ್ಷಕ ನಿರಂಜನ್ ಅವರು ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್  ಮತ್ತು ಇತರರು ಭಾಗವಹಿಸಿದ್ದರು. ಸರ್ಕಾರಿ ಉರ್ದು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ ಮಲ್ಲಿಕಾರ್ಜುನಪ್ಪ ಅವರು ಮಕ್ಕಳಿಗೆ ಯೋಗ ಮತ್ತು ಪ್ರಾಣಾಯಾಮದ ಅಭ್ಯಾಸ ಮಾಡಿಸಿ, ಮಹತ್ವವನ್ನು ತಿಳಿಸಿದರು. 

ಪ್ರೌಢಶಾಲಾ ಹಿರಿಯ ಶಿಕ್ಷಕ ರೇವಣಸಿದ್ದಪ್ಪ ಅಂಗಡಿ, ಸಹ ಶಿಕ್ಷಕಿಯರಾದ ಸೈದಾ ಕೌಸರ್, ರತ್ನವ್ವ ಸಾಲಿಮಠ, ಆರಿಫಾ ನಸ್ರೀನ್, ಫರ್ಜಾನ ಬಾನು, ಸಫೂರಾಬೀ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಫಹಿಮಿದ, ಸಹ ಶಿಕ್ಷಕರಾದ ರಜಾಕ್‌ವುಲ್ಲಾ, ಶಕೀಲಾ ಸುಲ್ತಾನ್, ನೂರ್ ಜಹಾನ್, ಶಾಂತ, ಮಂಗಳ, ವಿನುತಾ ಈ ವೇಳೆ ಹಾಜರಿದ್ದರು.

error: Content is protected !!