ಅತ್ತಿಗೆರೆ ಸ.ಶಾಲೆಯಲ್ಲಿ ಪರಿಸರ ದಿನ

ಅತ್ತಿಗೆರೆ ಸ.ಶಾಲೆಯಲ್ಲಿ ಪರಿಸರ ದಿನ

ದಾವಣಗೆರೆ, ಜೂ. 21- ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಮಾತೃ ಶ್ರೀ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ  ವತಿಯಿಂದ  ಸಸಿ ನೆಡುವ  ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೆ.ಓ. ಮಹೇಶ್ ಮಾತನಾಡಿ, ಪರಿಸರ  ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾವು ಪರಿಸರ ಉಳಿಸಬೇಕಿದೆ ಎಂದರು. ಗ್ರಾ.ಪಂ. ಸದಸ್ಯರಾದ ಆಶಾ ದೇವರಾಜ್ ಮಾತನಾಡಿ ದರು.

ಮಾತೃಶ್ರೀ ಸಂಸ್ಥೆಯ ಅಧ್ಯಕ್ಷ ಎ.ಎಲ್. ಕಿರಣ್ ಶಾಲಾ ಮಕ್ಕಳಿಗೆ ಪರಿಸರದ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಶೋಭಾ, ಅನಿತಾ, ಬುಡೇನ್ ಸಾಬ್ ಹಾಗೂ ಸಂಸ್ಥೆಯ ಸದಸ್ಯರಾದ ಲಕ್ಷ್ಮಿ ಪಿ. ಆಂಜನೇಯ, ಮುರುಳೀಧರ ಗಿರೀಶ್, ಯೋಗೇಶ್, ಕುಮಾರಸ್ವಾಮಿ, ಆನಂದ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!