ನ್ಯಾಮತಿ, ಜೂ. 19- ಮನೆಯ ಮುಂದೆ ನೀರಿನ ಮೋಟಾರ್ಗೆ ಅಳವಡಿಸಿದ ಕರೆಂಟ್ ವೈರನ್ನು ಮುಟ್ಟಿದಾಗ ಆಕಸ್ಮಿಕವಾಗಿ ಕರೆಂಟ್ ಕೈಗೆ ಹೊಡೆದು ಗಾಯಗಳಾಗಿ ಮೃತಪಟ್ಟಿರುವ ಘಟನೆ ನ್ಯಾಮತಿ ತಾಲ್ಲೂಕಿನ ಸೋಗಿಲು ಗ್ರಾಮದಲ್ಲಿ ನಡೆದಿದೆ.
ನ್ಯಾಮತಿ ತಾಲ್ಲೂಕಿನ ಸೋಗಿಲು ಗ್ರಾಮದ ಸೋಮ್ಲಾನಾಯ್ಕ ಅವರ ಪುತ್ರ ನಾಲ್ಕನೇ ತರಗತಿ ವಿದ್ಯಾರ್ಥಿ ವಾಸುನಾಯ್ಕ (10) ತಂದೆ- ತಾಯಿ ಇಬ್ಬರೂ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಮುಂದೆ ನೀರಿಗೆ ಅಳವಡಿಸಲಾಗಿದ್ದ ಮೋಟಾರಿನ ಕರೆಂಟ್ ವೈರನ್ನು ಮುಟ್ಟಿದ ಪರಿಣಾಮ ಈ ಘಟನೆ ನಡೆದಿದೆ.
ಶಂಕ್ರನಾಯ್ಕ ಫೋನ್ನ ಮೂಲಕ ವಿಷಯ ತಿಳಿಸಿದ ತಕ್ಷಣ ಹೊಲದಿಂದ ಬಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಶಿವಮೊಗ್ಗ ಮೆಗ್ಗಾನ್ ವೈದ್ಯರು ಪರೀಕ್ಷಿಸಿ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸೋಮ್ಲಾನಾಯ್ಕ ಅವರ ಪತ್ನಿ ನೀಡಿದ ದೂರಿನ ಅನ್ವಯ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.