ದಾವಣಗೆರೆ, ಜೂ.16- ಆಡ ಳಿತ ನ್ಯಾಯಾಧೀಕರಣದಲ್ಲಿ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ವೃತ್ತಿ ಕಾನೂನು ತರಬೇತಿ ನೀಡಲು ಕಾನೂನು ಪದವಿ ಹೊಂದಿದ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಜಿಲ್ಲೆಗೆ 8 ಗುರಿ ನಿಗಧಿಪಡಿಸಲಾಗಿದ್ದು, ಇಲಾಖೆಯ ವೆಬ್ ಸೈಟ್ www.tw.kar.nic.in ಮೂಲಕ ಇದೇ ದಿನಾಂಕ 18 ರಿಂದ 31 ರವರೆಗೆ ಅರ್ಜಿ ಸಲ್ಲಿಸಿ, ಸಲ್ಲಿಸಿದ ಮೂಲ ಪ್ರತಿಯೊಂದಿಗೆ ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಳ ಕಚೇರಿ, ಕೊಠಡಿ ಸಂಖ್ಯೆ : 45, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿಗೆ ಸಲ್ಲಿಸಲು ತಿಳಿಸಲಾಗಿದೆ.