ಹರಿಹರ ಸರ್ಕಾರಿ ಕಾಲೇಜ್ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಆತಂಕ
ಹರಿಹರ, ಜೂ.13- ಇತ್ತೀಚಿನ ದಿನಗಳಲ್ಲಿ ಯುವ ಜನತೆ ತಂಬಾಕು ಪದಾರ್ಥಗಳ ದಾಸರಾಗುತ್ತಿದ್ದಾರೆ. ತಂಬಾಕು ಪದಾರ್ಥಗಳಲ್ಲಿ 6 ಸಾವಿರಕ್ಕೂ ಹೆಚ್ಚು ಹಾನಿಕಾರಕ ರಾಸಾಯನಿಕ ಅಂಶಗಳಿದ್ದು, 60 ರಷ್ಟು ಅಂಶಗಳು ಕ್ಯಾನ್ಸರ್‌ಕಾರಕ ಆಗಿವೆ ಎಂದು ಭಾನುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಎನ್.ಆರ್ ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಸಮಾಜ ಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಸಹಯೋಗ ದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಆಧುನಿಕ ಸಮಾಜ ಮತ್ತು ಯುವಜನತೆ ಆರೋಗ್ಯ’ ಎಂಬ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು.
ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 40ರಷ್ಟು ಭಾರತೀಯರು ತಂಬಾಕು ಪದಾರ್ಥಗಳನ್ನು ಬಳಸು ತ್ತಿದ್ದಾರೆ. ಇದರಲ್ಲಿ ಶಾಲಾ- ಕಾಲೇಜಿನ ಮಕ್ಕಳೇ ತಂಬಾಕಿಗೆ ಹೆಚ್ಚು ಬಲಿಯಾ ಗುತ್ತಿರುವುದು ಅನಾರೋಗ್ಯಕರ ಸಮಾ ಜದ ಸೃಷ್ಠಿಗೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ, ಇಂತಹ ದುಶ್ಚಟ ಗಳಿಂದ ದೂರ ಇರುವಂತೆ ವಿದ್ಯಾರ್ಥಿ ಗಳಲ್ಲಿ ಅರಿವು ಮೂಡಿಸಿದರು.
ದೈಹಿಕ ಚಟುವಟಿಕೆ ಮತ್ತು ಶ್ರಮವಿಲ್ಲದೇ ಸ್ಥೂಲಕಾಯದ ದೇಹ ಹೆಚ್ಚಾಗುತ್ತಿದ್ದು, ಅನಾರೋಗ್ಯಕ್ಕೆ ಇದು ಕೂಡ ಪ್ರಮುಖ ಕಾರಣವಾಗಬಲ್ಲದು. ಬೀದಿ ಬದಿಯ ಆಹಾರ, ಫಾಸ್ಟ್‌ಫುಡ್, ಪ್ಯಾಕೆಟ್ ಆಹಾರ ಪದಾರ್ಥಗಳು, ನಗರ ಪ್ರದೇಶಗಳ ಧಾವಂತದ ಜೀವನ ಜನರ ಆರೋಗ್ಯ ಮತ್ತು ಜೀವಿತಾ ವಧಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಲೇಜು ಪ್ರಾಂಶುಪಾಲ ಪ್ರೊ. ಹೆಚ್.ವಿರುಪಾಕ್ಷಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಜಿ.ಎಸ್.ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಕ್ಷಿತ ಹೆಚ್.ಎಂ ಪ್ರಾರ್ಥಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೆಚ್. ತಿಪ್ಪೇಸ್ವಾಮಿ ಸ್ವಾಗತಿಸಿದರು, ಉಪನ್ಯಾಸಕಿ ಡಾ. ಜೆ.ಎಸ್ ತೇಜಸ್ವಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಅಪೂರ್ವ ಮತ್ತು ಜೆ.ಎನ್. ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಪರಮೇಶಿ ಎಸ್ ವಂದಿಸಿದರು.