ದಾವಣಗೆರೆ, ಜೂ.11- ನಗರ ಬಳಕೆದಾರರ ಸಹಕಾರ ಸಂಘಗಳ ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಗೌರವಾಧ್ಯಕ್ಷರಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ್ ನೇಮಕಗೊಂಡಿದ್ದಾರೆ.
ಸಂಘದ ಅಧ್ಯಕ್ಷ ಸಿ.ವೆಂಕಟೇಶ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಈ ನೇಮಕ ನಡೆಯಿತು. ಉಪಾಧ್ಯಕ್ಷ ಜಿ.ಆರ್. ವೀರಪ್ಪ, ಖಜಾಂಚಿ ಮೊಹಮ್ಮದ್ ಅಲ್ತಾಫ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.