ಹೊನ್ನಾಳಿ : ಮುಂಗಾರು ಮಳೆಗೆ ರೈತರ ಹರ್ಷ

ಹೊನ್ನಾಳಿ, ಜೂ. 6- ಬಿರು ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಜನತೆಗೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ರೈತ ಸಮುದಾಯದಲ್ಲಿ ಆಶಾ ಭಾವನೆ ಮೂಡಿಸಿದೆ.

ಕಳೆದ ವರ್ಷ ಹಿಂದೆಂದೂ ಕಂಡರಿಯದ ಭೀಕರ ಬರಗಾಲ ತಲೆದೋರಿ ರೈತ ಸಮುದಾಯ ಆತಂಕಕ್ಕೀಡಾಗಿದ್ದಿತು. ಈ ಬಾರಿ ಮಳೆ ಚನ್ನಾಗಿ ಬರಲಿದೆ ಎಂದು ಹವಾಮಾನ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಭೂಮಿಯನ್ನು ಹದಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಮಳೆ ಮಾಪನ ಕೇಂದ್ರದಲ್ಲಿ ಹೊನ್ನಾಳಿ-12.0, ಸವಳಂಗ ಮತ್ತು ಕುಂದೂರು-ಮಳೆಯಾಗಿರುವ ವರದಿಯಾಗಿಲ್ಲ, ಬೆಳಗುತ್ತಿ-23.4, ಹರಳಹಳ್ಳಿ-18.2, ಗೋವಿನಕೋವಿ-10.2, ಸಾಸ್ವೆಹಳ್ಳಿ-51.6, ಒಟ್ಟು ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳಿಂದ 16.4 ಮಿ.ಮೀ.ಮಳೆಯಾಗಿರುವ ವರದಿಯಾಗಿದೆ.

ಗೋವಿನಕೋವಿ ಹೋಬಳಿ ವ್ಯಾಪ್ತಿಯ ಹರಳಹಳ್ಳಿ ಗ್ರಾಮದ ಗುರುಶಾಂತಪ್ಪ ಇವರ ಮನೆಯ ಗೋಡೆಯು ಮಳೆಯಿಂದ ಬಿದ್ದಿದ್ದು, ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲವೆಂದು ಗ್ರೇಡ್-2 ತಹಶೀಲ್ದಾರ್ ಸುರೇಶ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

error: Content is protected !!