ಅಡುಗೆ ಅನಿಲ ಇಕೆವೈಸಿ ಸುರಕ್ಷತಾ ಪರಿಶೀಲನೆಗೆ ಮನವಿ

ದಾವಣಗೆರೆ, ಜೂ.6- ಪ್ರತಿ ಯೊಬ್ಬ ಅಡುಗೆ ಅನಿಲ ಗ್ರಾಹಕರು ಇಕೆವೈಸಿ ಸುರಕ್ಷತಾ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಅಡುಗೆ ಅನಿಲ (ಸರ್ಕಾರಿ ಸ್ವಾಮ್ಯ) ವಿತರಕರ ಸಮೂಹ ಮನವಿ ಮಾಡಿದೆ. ಇಕೆವೈಸಿ  ಹಾಗೂ ಸುರಕ್ಷತಾ ತಪಾಸಣೆ ಸಂಪೂರ್ಣ ಉಚಿತವಾಗಿರುತ್ತದೆ  ಹಾಗೆಯೇ ನಿಯಮಿತವಾಗಿ ಸಬ್ಸಿಡಿ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲು  ಇದು ಅಗತ್ಯವಾಗಿದೆ. 

ತಮ್ಮ ಸುರಕ್ಷತೆಗಾಗಿ ಸುರಕ್ಷಾ ಹೋಸ್‌ನ್ನು ಐದು ವರ್ಷ ಅವಧಿ ಮುಗಿದರೆ ಬದಲಾಯಿಸುವುದು ಅನಿವಾರ್ಯ. 

ಈ ಸುರಕ್ಷಾ ಹೋಸ್  ಅನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ವಿವರಕ್ಕೆ ಸಂಬಂಧಿಸಿದ ವಿತರಕರನ್ನು ಸಂಪರ್ಕಿಸುವಂತೆ ವಿತರಕರ ಪರವಾಗಿ ಜ್ಯೋತಿ ಗ್ಯಾಸ್ ಏಜೆನ್ಸಿಯ ಅಂದನೂರು ಆನಂದ್ ಕೋರಿದ್ದಾರೆ.    

error: Content is protected !!