ಚನ್ನಗಿರಿ, ಜೂ. 3 – ನಗರದಲ್ಲಿ ಮಟ್ಕಾ ಆರೋಪಿಯಾದ ಆದೀಲ್ ಬಿನ್ ಕಲೀಂವುಲ್ಲಾ ಮೇ 24ರಂದು ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಸಂಬಂಧಿಕರು, ಸಹಚರರು ಠಾಣೆಯ ಬಳಿ ಪ್ರತಿಭಟನೆ ಮಾಡಿ, ಪೀಠೋಪಕರಣ ಗಳನ್ನು ಒಡೆದು ಹಾಕಿ ಕರ್ತವ್ಯ ನಿರತ ಅಧಿ ಕಾರಿ, ಸಿಬ್ಬಂದಿಗಳಿಗೆ ಹಲ್ಲೆ ಮಾಡಿ, ಸರ್ಕಾರಿ ಆಸ್ತಿ ಪಾಸ್ತಿಗೆ ನಷ್ಟವುನ್ನುಂಟು ಮಾಡಿದ್ದರು.
ಪೊಲೀಸ್ ಅಧೀಕ್ಷಕರ ಮಾರ್ಗದರ್ಶನ ದಲ್ಲಿ ಚನ್ನಗಿರಿ ಪೊಲೀಸ್ ಸಿಬ್ಬಂದಿಗಳ ತಂಡ ಕಲ್ಲು ತೂರಿ ಪ್ರತಿಭಟನೆ ಮಾಡಿದ ಆರೋಪಿತರನ್ನು ಒಟ್ಟು 41 ಜನರನ್ನು ದಸ್ತಗಿರಿ ಮಾಡಿದ್ದಾರೆ. ಉಳಿದವರ ಪತ್ತೆಗಾಗಿ 2 ತಂಡಗಳನ್ನು ನಿಯೋಜಿಸಲಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಕ್ಷಮತೆಗೆ ಪೊಲೀಸ್ ಅಧೀಕ್ಷಕರು ಶ್ಲ್ಯಾಘಿಸಿದ್ದಾರೆ.