ನಗರದಲ್ಲಿ ವಿಶ್ವ ಹಿಮೊಫಿಲಿಯಾ ದಿನಾಚರಣೆ

ನಗರದಲ್ಲಿ ವಿಶ್ವ ಹಿಮೊಫಿಲಿಯಾ ದಿನಾಚರಣೆ

ದಾವಣಗೆರೆ, ಮೇ 15 – ನಗರದ ಹಿಮೊಫಿಲಿಯಾ ಸೊಸೈಟಿಯಲ್ಲಿ ಕಳೆದ ವಾರ ವಿಶ್ವ ಹಿಮೊಫಿಲಿಯಾ ದಿನ ಆಚರಿಸಲಾಯಿತು.

ಪಾರಿವಾಳ ಹಾರಿಸುವ ಮೂಲಕ `ವಿಶ್ವ ಹಿಮೊ ಫಿಲಿಯಾ ದಿನಾಚರಣೆ’ಗೆ  ಸಾಂಕೇತಿಕ ಚಾಲನೆ ನೀಡಲಾಯಿತು. ವೇದಿಕೆ ಕಾರ್ಯಕ್ರಮವನ್ನು ಸುಕ್ಷೇಮ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀಶೈಲ ಎಂ. ಬ್ಯಾಡಗಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ, ಲೈಫ್ ಲೈನ್ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಎಂ. ದೊಡ್ಡಿಕೊಪ್ಪದ್, ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಸದಾಶಿವಪ್ಪ, ಸೊಸೈಟಿಯ ಮಹಿಳಾ ವಿಭಾಗದ ಅಧ್ಯಕ್ಷರಾದ ಡಾ. ಮೀರಾ ಹನಗವಾಡಿ ಮತ್ತು ಸಂಸ್ಥೆಯ ಸಿಬ್ಬಂದಿಗಳಿದ್ದರು.

error: Content is protected !!