ನಗರದ ದೊಡ್ಡಪೇಟೆಯಲ್ಲಿ ಇಂದಿನಿಂದ ಬಸವ ಜಯಂತ್ಯೋತ್ಸವ

ನಗರದ ದೊಡ್ಡಪೇಟೆಯಲ್ಲಿ   ಇಂದಿನಿಂದ  ಬಸವ ಜಯಂತ್ಯೋತ್ಸವ

ದೊಡ್ಡಪೇಟೆಯ ಬಸವ ಮಂಟಪದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಮೂರು ದಿನ   ಶ್ರೀ ಬಸವೇಶ್ವರ ಜಯಂತ್ಯೋತ್ಸವ ನಡೆಯಲಿದೆ.

ಇಂದು ಪ್ರಾತಃಕಾಲ ವಚನಾಭಿಷೇಕ, ಗಣರಾಧನೆ, ರಾತ್ರಿ 7.30ಕ್ಕೆ ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಭಜನಾ ಸಂಘದಿಂದ ಭಜನೆ ಏರ್ಪಾಡಾಗಿದೆ.

ನಾಳೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ  ತೊಟ್ಟಿಲು ಪೂಜೆ, ಸಂಜೆ
6 ಗಂಟೆಗೆ  ಹೂವಿನ ಅಲಂಕಾರದ ಅಡ್ಡಪಲ್ಲಕ್ಕಿಯಲ್ಲಿ ಶ್ರೀ ಬಸವೇಶ್ವರ ಬೆಳ್ಳಿ ಪುತ್ಥಳಿಯ ಭವ್ಯ ಮೆರವಣಿಗೆಯು ರಾಜಬೀದಿಗಳಲ್ಲಿ ಜರುಗಲಿದೆ.

ನಾಡಿದ್ದು ದಿನಾಂಕ 11ರ ಶನಿವಾರ ಸಾರ್ವಜನಿಕರಿಗೆ ಅನ್ನ ದಾಸೋಹ ಏರ್ಪಡಿಸಲಾಗಿದ್ದು, ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ ಸಹೋದರರು ದಾಸೋಹದ ಸೇವಾರ್ಥಿಗಳಾಗಿದ್ದಾರೆ. 

error: Content is protected !!