ದಾವಣಗೆರೆ : ಗಾಂಧಿ ನಗರದಲ್ಲಿ ಇಂದಿನಿಂದ 10ರ ವರೆಗೆ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. ಇಂದು ಬೆಳಗ್ಗೆ 6ಕ್ಕೆ ಹರಿಹರದ ತುಂಗಭದ್ರಾ ನದಿಗೆ ದೇವಿಯು ಹೊಳೆ ಪೂಜೆಗೆ ಹೋಗಲಿದ್ದು, ಸಂಜೆ 6ಕ್ಕೆ ಮೆರವಣಿಗೆ ನಡೆಯಲಿದೆ. ಇದೇ ದಿನಾಂಕ 9ರಂದು ರಾತ್ರಿ 10ಕ್ಕೆ ಭಜನೆ ಮತ್ತು ದಿನಾಂಕ 10ರ ಬೆಳಗ್ಗೆ 6ಕ್ಕೆ ದೇವಿಯ ಅಗ್ನಿಕುಂಡ ಜರುಗಿದ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸೇವಾ ಸಮಿತಿ ತಿಳಿಸಿದೆ.
July 23, 2024