ದಾವಣಗೆರೆ, ಮೇ 5- ಆತ್ಮೀಯ ಮತದಾರ ಬಂಧುಗಳೇ ನಾನು ಪ್ರತಿಯೊಬ್ಬರ ಮನೆ ತಲುಪುವುದಕ್ಕೆ ಆಗದೇ ಇರಬಹುದು. ಆದರೆ, ನಿಮ್ಮೆಲ್ಲರ ಮನ ತಲುಪಿದ್ದೇನೆ ಎನ್ನುವ ವಿಶ್ವಾಸ ನನ್ನಲ್ಲಿದೆ. ಚುನಾವಣೆ ಬಳಿಕ ಎಲ್ಲರನ್ನೂ ಮತ್ತೊಮ್ಮೆ ಭೇಟಿಯಾಗುತ್ತೇನೆ ಎಂದು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರು ತಿಳಿಸಿದ್ದಾರೆ.
ನನ್ನ ಕ್ರಮ ಸಂಖ್ಯೆ 1, ಗುರುತು ಕಮಲ. ಮೇ 7 ರಂದು ನಡೆಯಲಿರುವ ಚುನಾವಣೆಯಲ್ಲಿ ನನಗೆ ನಿಮ್ಮ ಅಮೂಲ್ಯ ಮತವನ್ನು ನೀಡಿ ಗೆಲ್ಲಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತ ಯಾಚಿಸಿ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದ ಪ್ರತಿಯೊಂದು ಮನೆಗೂ ಭೇಟಿ ನೀಡಬೇಕು ಅನ್ನೋ ಆಸೆ ನನ್ನದಾಗಿತ್ತು. ಆದರೆ, ಸಮಯದ ಅಭಾವವಾಗಿದ್ದು, ಬಹುತೇಕ ಗ್ರಾಮಗಳಿಗೆ ಭೇಟಿ ನೀಡಿ ಮತ ಯಾಚಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನನ್ನ ಪರವಾಗಿ ನನ್ನ ಅಪಾರ ಕಾರ್ಯಕರ್ತರ ಪಡೆ ಪ್ರತಿ ಮನೆಗೂ ತಲುಪಿ ಮತ ಯಾಚಿಸಿದ್ದಾರೆ. ಅವರು ಬೇರೆಯಲ್ಲ, ನಾನು ಬೇರೆಯಲ್ಲ ಎಂದು ಭಾವಿಸಿದ್ದೇನೆ. ನಾನೇ ನಿಮ್ಮ ಮನೆ – ಬಾಗಿಲಿಗೆ ಬಂದು ಮತಯಾಚಿಸಿದ್ದೇನೆ ಎಂದು ತಿಳಿದುಕೊಂಡು ನನಗೆ ಮತ ಹಾಕಬೇಕು ಎಂದು ಗಾಯತ್ರಿ ಸಿದ್ದೇಶ್ವರ ಅವರು ಮನವಿ ಮಾಡಿದರು.