ದಾವಣಗೆರೆ, ಮೇ 5 – ಯುವ ಮುಖಂಡ ಆರ್.ಟಿ ಪ್ರಶಾಂತ್ ದುಗತ್ತಿಮಠರವರ ಮನೆಯಲ್ಲಿ ನಡೆದ ಶ್ರೀಶೈಲ ಜಗದ್ಗುರುಗಳವರ ಇಷ್ಟಲಿಂಗ ಪೂಜೆ ಮತ್ತು ಧರ್ಮ ಸಮಾರಂಭದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮತ್ತು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಆಗಮಿಸಿ ಜಗದ್ಗುರುಗಳವರ ಆಶೀರ್ವಾದ ಪಡೆದರು.
ಧರ್ಮ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದ ಶ್ರೀಶೈಲ ಜಗದ್ಗುರುಗಳವರು ಧರ್ಮದ ಹಾದಿಯಲ್ಲಿ ಎಲ್ಲರೂ ಸಾಗಬೇಕು.ಧರ್ಮವನ್ನು ಕಾಪಡಿದವರಿಗೆ ಧರ್ಮ ಕಾಪಾಡುತ್ತದೆ ಮತ್ತು ಧರ್ಮದ ಪರವಾಗಿ ಹೋರಾಟ ಮಾಡಿದವರಿಗೆ ಜೀವನದಲ್ಲಿ ಗೆಲುವು ನಿಶ್ಚಿತ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಮಠಾ ಧೀಶರು, ಶಾಸಕ ಶಾಮನೂರು ಶಿವಶಂಕರಪ್ಪ, ಸಮಾಜದ ಮುಖಂಡ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್.ಕೆ.ವೀರಣ್ಣ, ಡಿ.ಎಂ ಹಾಲಸ್ವಾಮಿ, ಟಿ.ಎಂ.ಉಮಾಪತಯ್ಯ, ಎನ್.ಎಂ.ತಿಪ್ಪೇಸ್ವಾಮಿ, ಕೆ.ಎಂ.ಪರಮೇಶ್ವ ರಯ್ಯ, ಬಿ.ಎಂ.ವಾಗೀಶ್ ಸ್ವಾಮಿ, ಹುಲ್ಲುಮನಿ ಗಣೇಶ್, ದೇವರಮನಿ ಯೋಗೀಶ್, ಎನ್ ಹೆಚ್ ಪಾಟೀಲ್, ಡಿ.ಜಿ.ಶಿವಾನಂದಪ್ಪ, ಡಾ.ಕೊಟ್ರೇಶ್ ಬಿದರಿ, ಮಲ್ಲಿಕಾರ್ಜುನ್ ಕಲ್ಮಠ್, ಟಿ.ಎಂ.ಶಿವಶಂಕರ್, ಉಳುವಯ್ಯ ಸೇರಿದಂತೆ ಅನೇಕ ಮುಖಂಡರು ಮತ್ತು ನೂರಾರು ಭಕ್ತರು ಉಪಸ್ಥಿತರಿದ್ದರು.