ಪಂಚಮಸಾಲಿ ಸಮಾಜಕ್ಕೆ ಸಿದ್ದೇಶ್ವರ ಅಪಮಾನ : ಅಶೋಕ್

ದಾವಣಗೆರೆ, ಮೇ 1- ಸಂಸದ ಜಿ.ಎಂ. ಸಿದ್ದೇಶ್ವರ ಅವರಿಂದ ಪಂಚಮಸಾಲಿ ಸಮಾಜಕ್ಕೆ ಅಪಮಾನ, ಅನ್ಯಾಯವಾಗಿದ್ದು, ಸಮಾಜ ಬಾಂಧವರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಅಶೋಕ್ ಗೋಪನಾಳ್ ಕರೆ ನೀಡಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ತಿಂಗಳ ಹಿಂದೆ ಕೊಳೇನಹಳ್ಳಿ ಗ್ರಾಮದಲ್ಲಿ ರಾಣಿ ಚನ್ನಮ್ಮನ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಹಣ ಕೇಳಲು ಹಾಗೂ ಕಾರ್ಯಕ್ರಕ್ಕೆ ಆಹ್ವಾನಿಸಲು ಸಮಾಜ ಬಾಂಧವರು ಸಂಸದರ ಬಳಿ ಹೋಗಿದ್ದಾಗ ಅವರು ಅತಿ ಕೀಳು ಮಟ್ಟದಲ್ಲಿ ನಿಂದಿಸಿ ಕಳುಹಿಸಿದ್ದಾರೆ. ಇಂತಹ ಸಂಸದರಿಗೆ ಸಮಾಜ ಬಾಂಧವರೇ ಉತ್ತರಿಸಬೇಕು ಎಂದರು.

ಹರಪನಹಳ್ಳಿ ತಾ. ಪಂಚಮಸಾಲಿ ಮುಖಂಡ ಕೊಟ್ಟೂರು ಗೌಡ್ರು ಮಾತನಾಡಿ, ಯಡಿಯೂರಪ್ಪನವರು ನಮ್ಮ ಸಮಾಜದ ಮುಖಂಡ ಯತ್ನಾಳ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡದೆ ಅನ್ಯಾಯ ಮಾಡಿದರು. ಇಲ್ಲಿನ ಸಂಸದರು ನಮ್ಮ ಸಮಾಜದ ಅಜಯ್ ಕುಮಾರ್ ಸೇರಿದಂತೆ ಲೋಕಿಕೆರೆ ನಾಗರಾಜ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಮತ ಪ್ರಚಾರ ಮಾಡದೆ ಸೋಲಿಗೆ ಕಾರಣರಾದರು ಎಂದು ಆರೋಪಿಸಿದರು. ಸಂಸದರ ವರ್ತನೆ, ಸಮಾಜಕ್ಕೆ ಆಗುತ್ತಿರುವ ಅನ್ಯಾಯದಿಂದ ಬೇಸತ್ತು ನಾನು ಈಗಾಗಲೇ ಕಾಂಗ್ರೆಸ್ ಸೇರಿದ್ದೇನೆ ಎಂದು ಅಶೋಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ದಪ್ಪ ಕಂಚಿಕೇರಿ, ಕೊಳೇನಹಳ್ಳಿಯ ಸ್ವಾಮಿಲಿಂಗಪ್ಪ, ಕರಿಯಪ್ಪ, ನಾಗರಾಜ್, ಮಾರಿ ಮೂರ್ತಿ, ಹೇಮಣ್ಣ, ಷಣ್ಮುಖಪ್ಪ, ಬಸವನಗೌಡ್ರು ಉಪಸ್ಥಿತರಿದ್ದರು.

error: Content is protected !!