ದಾವಣಗೆರೆ – ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ನಿಂದ ನಡೆಯುತ್ತಿರುವ ಶ್ರೀ ಕರಿಯಾಂಬಿಕಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಇಂದು ಶ್ರೀ ಅಮ್ಮನವರ ದೊಡ್ಡಜಾತ್ರೆ ಜರುಗಲಿದೆ. ನಾಳೆ ದಿನಾಂಕ 2 ರಂದು ಮಧ್ಯಾಹ್ನ 3ಕ್ಕೆ ಹುಲ್ಲುಮನೆ ಭೀಮಪ್ಪನವರ ಜಮೀನಿನಲ್ಲಿ ಭಾರೀ ಬಹಿರಂಗ ಬಯಲು ಜಂಗೀ ಕುಸ್ತಿಗಳ ಉದ್ಘಾಟನೆ ನಡೆಯಲಿದೆ. ಅಂದು ಸಂಜೆ 6.30ಕ್ಕೆ ಕಲಾ ತಂಡದವರಿಂದ ನಿಟುವಳ್ಳಿಯ ಶ್ರೀ ಆಂಜನೇಯ ರಂಗ ಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದ್ದು, ಸಂಜೆ 7.30ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಪ್ರವೀಣ್ ಹುಲ್ಲುಮನಿ (9986212971) ಅವರನ್ನು ಸಂಪರ್ಕಿಸಬಹುದು.
July 3, 2024