ಹರಪನಹಳ್ಳಿ : ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಪರ ಶಾಸಕರಾದ ಎಂ.ಪಿ. ಲತಾ ನೇತೃತ್ವದಲ್ಲಿ ಪ್ರಚಾರ
ಹರಪನಹಳ್ಳಿ. ಏ.25- ಹರಪನಹಳ್ಳಿ ಕ್ಷೇತ್ರವು ಕಾಂಗ್ರೆಸ್ನ ಭದ್ರಕೋಟೆಯಾಗಿದ್ದು, ಇಲ್ಲಿನ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿದರೆ ಕಾಂಗ್ರೆಸ್ಸಿಗೆ ಸೋಲೇ ಇಲ್ಲ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೆಲಿಗಿ, ಹಲವಾಗಲು, ಹುಲಿಕಟ್ಟಿ ಹಾಗೂ ಚಿಗಟೇರಿ ಗ್ರಾಮಗಳಲ್ಲಿ ಮತ ಯಾಚಿಸಿ ಮಾತನಾಡಿದರು.
ನಮ್ಮ ಸರ್ಕಾರ ಪಕ್ಷಾತೀತವಾಗಿ 5 ಗ್ಯಾರಂಟಿಗಳನ್ನು ಸಮಾಜದ ಎಲ್ಲಾ ವರ್ಗ ಗಳಿಗೂ ಪ್ರಾಮಾಣಿಕವಾಗಿ ತಲುಪಿಸಿ, ತನ್ನ ಶ್ರೇಯಸ್ಸನ್ನು ಹೆಚ್ಚಿಸಿಕೊಂಡಿದೆ ಎಂದರು.
ಎಲ್ಲರಿಗೂ ಕಾಂಗ್ರೆಸ್ ಪಕ್ಷ ಒಳಿತು ಮಾಡಿದೆ. ಈ ನಿಟ್ಟಿನಲ್ಲಿ ನಮ್ಮ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸೋಣ ಎಂದರು.
ಮೂರು ಬಾರಿ ಸಂಸದರಾದ ಸಿದ್ದೇಶ್ವರರು, ಭದ್ರಾದಿಂದ ಕೊಂಡಜ್ಜಿ ಕೆರೆಗೆ ನೀರು ಬರುತ್ತಿದ್ದರೂ ಕೊಂಡಜ್ಜಿ ಕೆರೆ ಮಳೆಯಾಶ್ರಿತ ಎಂದು ಸುಳ್ಳು ಹೇಳುತ್ತಾರೆಂದು ವಾಗ್ದಾಳಿ ಮಾಡಿದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಮಾತನಾಡಿ, ಬಿಜೆಪಿ -ಜನತಾ ದಳದವರು ಖಾತರಿ ಯೋಜನೆಗಳ ವಿರುದ್ಧ ವ್ಯಂಗ್ಯವಾಡಿ ದರೂ, ಅದೇ ಯೋಜನೆಗಳನ್ನು ಪ್ರಧಾನ ಮಂತ್ರಿ ಖಾತರಿ ಯೋಜನೆ ಎಂದು ಮರು ನಾಮಕರಣ ಮಾಡುತ್ತಿದ್ದಾರೆ ಎಂದರು.
ನಮ್ಮ ಯೋಜನೆಗಳಿಂದ ಆರ್ಥಿಕತೆ ಕುಸಿಯುತ್ತದೆ ಎಂದ ಬಿಜೆಪಿ ನಾಯಕರು, ಇಂದು ನಮ್ಮನ್ನೇ ಅನುಕರಣೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಶಾಮನೂರು ಕುಟುಂಬವು ಉತ್ತಮ ಸಮಾಜ ಸೇವೆ ಮಾಡಿದೆ. ಅಭ್ಯರ್ಥಿಯಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಉತ್ತಮ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವ ಜತೆಗೆ ರಾಜ್ಯದಿಂದ 20 ಸಂಸದರನ್ನು ಸಂಸತ್ ಭವನಕ್ಕೆ ಕಳುಹಿಸಬೇಕು ಎಂದರು.
ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಮಾತನಾಡಿ, ನಮ್ಮ ಪಕ್ಷ ಪಂಚ ಗ್ಯಾರಂಟಿಗಳಿಂದ ಜನರಿಗೆ ಅನುಕೂಲ ಮಾಡಿದೆ. ಆದ್ದರಿಂದ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಬೂತ್ ಮಟ್ಟದಲ್ಲಿ ತಾವೇ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆ ಎದುರಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಮುಖಂಡ ಎನ್. ಕೊಟ್ರೇಶ್, ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿರಾಜ್ ಶೇಖ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಮುಖಂಡರಾದ ಎಂ.ಪಿ. ವೀಣಾ ಮಹಾಂತೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ರಾಜಶೇಖರ್, ಸಿ. ಚಂದ್ರಶೇಖರ್ ಭಟ್ಟ, ಎಚ್.ಬಿ. ಪರಶುರಾಮಪ್ಪ, ಹಲಗೇರಿ ಮಂಜುನಾಥ, ಹೊಸಕೋಟಿ ನಾಗರಾಜ, ಮುಖಂಡರಾದ ಪ್ರಕಾಶ್ ಪಾಟೀಲ್, ಶಶಿಧರ್ ಪೂಜಾರ್, ಹಾಲೇಶ್ ಗೌಡ, ಪುರ ಸಭೆ ಸದಸ್ಯರಾದ ಡಿ. ಅಬ್ದುಲ್ ರೆಹಮಾನ್ ಸಾಬ್, ಲಾಟಿ ದಾದಾಪೀರ್, ಜಾಕೀರ್, ಭರತೇಶ್, ಯುವ ಮುಖಂಡ ಪಿ.ಟಿ. ಭರತ್, ಎಚ್.ಕೆ. ಹಾಲೇಶ್, ಭೀಮಪ್ಪ, ಜಾಕೀರ್, ಗುತ್ತಿಗೆದಾರರಾದ ಬಿ. ಅಂಜಿನಪ್ಪ, ಟಿ. ಉಮಾಕಾಂತ, ಮಲ್ಲಿಕಾರ್ಜುನ್ ಸ್ವಾಮಿ ಕಲ್ಮಠ, ಯಡಿಹಳ್ಳಿ ಶೇಖರಪ್ಪ, ಶಿರಗನಹಳ್ಳಿ ಪರುಶುರಾಮಪ್ಪ, ಮಾಗನಹಳ್ಳಿ ಉದಯಶಂಕರ್.ಶಿಂಗ್ರಿಹಳ್ಳಿ ಬಸವರಾಜ, ತೆಲಿಗಿ ಕೆ. ಯೊಗೇಶ್, ಕಡತಿ ಜಗದೀಶ್, ಗುಂಡಗತ್ತಿ ನೇತ್ರಾವತಿ, ದುಗ್ಗಾವತಿ ಮಂಜುನಾಥ್ ಮತ್ತು ಇತರರು ಇದ್ದರು.