ಮಲೇಬೆನ್ನೂರು, ಏ. 19 – ಸುಕ್ಷೇತ್ರ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ಮಹಾರಥೋತ್ಸವವು ಗುರುವಾರ ಬೆಳಗಿನ ಜಾವ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದೊಂದಿಗೆ ಜರುಗಿತು.
ಗ್ರಾಮ ದೇವತೆ ದುರ್ಗಾಂಬ, ಗಲ್ಲೆ, ದುರ್ಗವ್ವ, ದೊಣ್ಣೆ ಕೆಂಚವ್ವ, ಭೂತಪ್ಪ ಮತ್ತು ಜಿ.ಟಿ. ಕಟ್ಟೆ ಹಾಗೂ ಕೊಮಾರನಹಳ್ಳಿ ಗ್ರಾಮಗಳ ಬೀರ ದೇವರುಗಳ ಸಾನ್ನಿಧ್ಯದಲ್ಲಿ ಜರುಗಿದ ರಥೋತ್ಸವಕ್ಕೆ ವಿವಿಧ ಕಲಾ-ಮೇಳಗಳು ಮೆರಗು ತಂದವು. ಸಂಜೆ ಓಕಳಿ ಮತ್ತು ರಾತ್ರಿ ಡೊಳ್ಳು ಮೇಳ ಹಾಗೂ ತೈಲಾದಿಗಳಿಂದ ಧೂಪ ಹಾಕಲಾಯಿತು.
ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಶ್ರೀ ಆಂಜನೇಯ ಸ್ವಾಮಿಯ ಶ್ರೀ ದುರ್ಗಾಂಬ, ಶ್ರೀ ಮಾತಂಗ್ಯಮ್ಮ , ಶ್ರೀ ಬೀರದೇವರೊಂದಿಗೆ ಗ್ರಾಮದ ಎಲ್ಲಾ ಮನೆಗಳಿಗೆ ಸಂದರ್ಶನ ನೀಡಲಿದೆ.