ರಾಣೇಬೆನ್ನೂರು, ಏ.18 – ನೇಕಾರರು ಶಿಕ್ಷಣ ಮತ್ತು ಸಂಘಟನೆಗೆ ಆದ್ಯತೆ ನೀಡುವುದರ ಜೊತೆಗೆ ಎಲ್ಲಾ ಒಳಪಂಗಡಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಜಿಲ್ಲಾ ನೇಕಾರ ಒಕ್ಕೂಟದ ಗೌರವ ಅಧ್ಯಕ್ಷ ಡಾ. ಬಸವರಾಜ ಕೇಲಗಾರ ಹೇಳಿದರು.
ಅವರು ಇಲ್ಲಿನ ಸಾಲೇಶ್ವರ ಸಭಾಭವನದಲ್ಲಿ ನಡೆದ ನೇಕಾರ ಸಂತ ದೇವರ ದಾಸಿಮಯ್ಯ ಜಯಂತಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಿವೃತ್ತ ಶಿಕ್ಷಕ ಎಸ್.ಕೆ.ದುರ್ಗದ ಸೀಮಿ ದಾಸಿಮಯ್ಯ ಕುರಿತು ಉಪನ್ಯಾಸ ನೀಡಿದರು. ಪಟ್ಟಸಾಲಿ ಸಮಾಜದ ಅಧ್ಯಕ್ಷ ರಮೇಶ್ ಗುತ್ತಲ, ಶಂಕರಣ್ಣ ನ್ಯಾಮತಿ, ಅಶೋಕ ದುರ್ಗದಸೀಮಿ, ಸಂಕಪ್ಪ ಮಾರನಾಳ, ವೆಂಕಟೇಶ ಕಾಕಿ, ಶಾರದಾ ಆನ್ವೇರಿ, ಲಕ್ಷ್ಮಿ ಎಡಕೆ, ಸುಮಾ ಹಳ್ಳಿ, ಜಯಶ್ರೀ ಕುಂಚೂರ, ಆನಂದ ಕದರಮುಂಡಲಗಿ ಮತ್ತಿತರರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೇಕಾರ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಅವರು, ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.