ರಾಯಚೂರು, ಏ.15- ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ ಶ್ರೀ ತ್ರಯಂಬಕೇಶ್ವರ ಜಾತ್ರೆಯ ಅಂಗವಾಗಿ ಶ್ರೀ ತ್ಯಯಂಬಕೇಶ್ವರನ ರಥೋತ್ಸವವು ನಾಡಿದ್ದು ದಿನಾಂಕ 17 ರಂದು ಸಂಜೆ 6 ಕ್ಕೆ ಜರುಗಲಿದೆ.
ಜಾತ್ರೆಗೆ ನೆರೆ ರಾಜ್ಯದ ಭಕ್ತರೂ ಸಹ ಆಗಮಿಸಲಿದ್ದಾರೆ. ಕವಿತಾಳ ಪಟ್ಟಣದಲ್ಲಿ ರುವ 12ನೇ ಶತಮಾನದ ಪ್ರಾಚೀನ ತ್ರಯಂಭಕೇಶ್ವರ ದೇವಸ್ಥಾನವು ಹಲವು ವಿಶೇಷತೆಗಳಿಂದ ಕೂಡಿದೆ. ಪ್ರತಿವರ್ಷ ಯುಗಾದಿ ದಿನ ಸೂರ್ಯನ ರಶ್ಮಿ ನೇರವಾಗಿ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸುತ್ತದೆ. ಈ ಕೌತುಕ ದೃಶ್ಯ ನೋಡುವುದಕ್ಕೆ ಪ್ರತಿವರ್ಷವೂ ಭಕ್ತರು ಆಗಮಿತ್ತಾರೆ. ಯುಗಾದಿ ದಿನ ತ್ರಯಂಭಕೇಶ್ವರನ ದರ್ಶನ ಪಡೆಯುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಈ ದೇವಸ್ಥಾನಕ್ಕೆ ಎಂಟು ನೂರು ವರ್ಷಗಳ ಇತಿಹಾಸ ಇದೆ ಎಂದು ಜೆ. ಈಶ್ವರ್ ಸಿಂಗ್ ಕವಿತಾಳ ತಿಳಿಸಿದ್ದಾರೆ.