ಪಿಯುಸಿ : ಪ್ರಿಯಾಂಕ ಅದ್ಭುತ ಸಾಧನೆ

ಪಿಯುಸಿ : ಪ್ರಿಯಾಂಕ ಅದ್ಭುತ ಸಾಧನೆ

ಹರಿಹರ, ಏ.11- ದ್ವಿತೀಯ ಪಿಯುಸಿ ಈ ವರ್ಷದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಮಹಾವಿದ್ಯಾಲಯ ಮೂಡಬಿದ್ರೆಯಲ್ಲಿ ವಿದ್ಯಾಭ್ಯಾಸ ಮಾಡಿದ ಕು. ಎಸ್.ಎಂ. ಪ್ರಿಯಾಂಕ ತಂದೆ ಮಾಂತೇಶಪ್ಪ ಎಂ. ಇವರು ಶೇ.94 ರಷ್ಟು (564) ಅಂಕ ಪಡೆದಿದ್ದಾರೆ. ಪ್ರಿಯಾಂಕ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.80 ರಷ್ಟು ಅಂಕ ಗಳಿಸಿ, ಪುಷ್ಪ ಮಹಾಲಿಂಗಪ್ಪ ಶಾಲೆಗೆ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದರು.

ಪ್ರಿಯಾಂಕ ಸಾಧನೆಗೆ ಅವರ ತಂದೆ ರಾಜನಹಳ್ಳಿಯ ಮಾಜಿ ಗ್ರಾ.ಪಂ. ಅಧ್ಯಕ್ಷ ಎಂ.ಮಹಾಂತೇಶ್, ತಾಯಿ ಲಲಿತಾ ಮಹಾಂತೇಶ್ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

error: Content is protected !!