ನಮ್ಮ ಪೂರ್ವಜರ ಕಾಲದ ತಂತ್ರಜ್ಞಾನ ಈಗಲೂ ವಿಜ್ಞಾನಕ್ಕೆ ಸವಾಲಾಗಿದೆ

ನಮ್ಮ ಪೂರ್ವಜರ ಕಾಲದ ತಂತ್ರಜ್ಞಾನ ಈಗಲೂ ವಿಜ್ಞಾನಕ್ಕೆ ಸವಾಲಾಗಿದೆ

ಜಿಎಂಐಟಿ ಪಾಲಿಟೆಕ್ನಿಕ್ ಕಾಲೇಜಿನ ಕಾರ್ಯಾಗಾರದಲ್ಲಿ ಪ್ರಾಧ್ಯಾಪಕ ಪುಟ್ಟರಾಜು

ದಾವಣಗೆರೆ, ಏ. 3- – ಈ ಹಿಂದೆ ನಮ್ಮ ಪೂರ್ವ ಜರು, ಪ್ರಕೃತಿ ಸಹಜವಾಗಿ ದೊರೆಯುತ್ತಿದ್ದ ಮರ ಮುಟ್ಟು, ಕಲ್ಲುಬಂಡೆ, ಬಿದಿರು ಹಾಗೂ ಇತರೆ ವಸ್ತು ಗಳಿಂದ,  ಅಂದಿನ ಕಾಲದ ತಂತ್ರಜ್ಞಾನವನ್ನು ಬಳಸಿ ಕೊಂಡು ಎಂತಹ ಭವ್ಯ ನಿರ್ಮಾಣಗಳನ್ನು ಮಾಡಿ, ಈಗಲೂ ನಮ್ಮ ಬುದ್ದಿ ಶಕ್ತಿಗೆ ಹಾಗೂ ವಿಜ್ಞಾನಕ್ಕೆ ಸವಾಲು ಎನಿಸುವಂತಹ ಕಾರ್ಯಗಳನ್ನು  ಮಾಡಿದ್ದಾರೆ ಎಂದು ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಸಹಾ ಯಕ ಪ್ರಾಧ್ಯಾಪಕ  ಎಂ.ಎಚ್  ಪುಟ್ಟರಾಜು  ಹೇಳಿದರು.

ನಗರದ ಜಿ.ಎಂ.ಐ.ಟಿ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ಫೋರಂ ‘ಅಭಿಯಂತ್’ ವತಿಯಿಂದ ‘ಸಾಂಪ್ರದಾಯಿಕ  ನಿರ್ಮಾಣ ಸಾಮಗ್ರಿ ಗಳು ಮತ್ತು ಆಧುನಿಕ ನಿರ್ಮಾಣ ಸಾಮಗ್ರಿಗಳು’ ಎಂಬ ವಿಷಯವಾಗಿ  ಹಮ್ಮಿಕೊಳ್ಳಲಾಗಿದ್ದ  ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

ಆದರೆ ಇಂದು ಆಧುನಿಕ ಜೀವನ ಶೈಲಿಗೆ ಸರಿಹೊಂದುವಂತೆ ವಿಜ್ಞಾನದ ಸದ್ಬಳಕೆಯೊಂ ದಿಗೆ ಅತ್ಯಾಧುನಿಕ ತಂತ್ರ ಜ್ಞಾನದ ಸಹಾಯದೊಂ ದಿಗೆ ನವೀನ ಮಾದರಿಯ ಕಟ್ಟಡ ಸಾಮಗ್ರಿಗಳಾದ ಹಗುರವಾದ ಇಟ್ಟಿಗೆ, ಹೆಚ್ಚು ಸಾಮರ್ಥ್ಯದ ಕಬ್ಬಿಣ, ಆಟೋಮೇಟೆಡ್ ಕಾಂಕ್ರೀಟ್ ಘಟಕ, ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ ಹೀಗೆ ಹಲವಾರು ಸಾಮಗ್ರಿಗಳ ಲಭ್ಯತೆ, ಬಳಕೆ, ಬಾಳಿಕೆ, ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು  ಅವರು ತಿಳಿಸಿದರು.

ಪ್ರಾಂಶುಪಾಲ  ಡಾ ಬಿ. ಆರ್. ಶ್ರೀಧರ್‍, ಸಿವಿಲ್ ಇಂಜಿನಿಯರ್ ವಿಭಾಗದ ಮುಖ್ಯಸ್ಥ ನಿಂಗರಾಜು ಸಿ, ಫೋರಂ ಸಂಯೋಜಕಿ ಪೂರ್ಣಿಮಾ ಕೆ. ಬಿ, ಉಪನ್ಯಾಸಕರಾದ ಮಾರುತಿ ಕೆ.ಪಿ, ಗಂಗಮ್ಮ ಜೆ.ಸಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿದ್ಯಾರ್ಥಿ ಆರ್. ಹೆಚ್. ವಿವೇಕಾನಂದ  ನಿರೂಪಿಸಿದರು. ಸುಷ್ಮಿತಾ ಬಿ.ಕೆ ಹಾಗೂ ಸಂಗಡಿ ಗರು ಪ್ರಾರ್ಥಿಸಿದರು.   ಲಕ್ಷಿ  ಎನ್ .ಎಸ್ ಸ್ವಾಗತಿ ಸಿದರು ಮತ್ತು   ಮಾರುತಿ ಮಣಿ ರೆಡ್ಡಿ  ವಂದಿಸಿದರು.

error: Content is protected !!