ರಸ್ತೆಯಲ್ಲಿ ಬೋರ್‌ವೆಲ್ ನೀರು ಪೋಲು : ಆಕ್ರೋಶ

ರಸ್ತೆಯಲ್ಲಿ ಬೋರ್‌ವೆಲ್ ನೀರು ಪೋಲು : ಆಕ್ರೋಶ

ಹರಿಹರ, ಮಾ.22- ನಗರದಲ್ಲಿ ತುಂಗಭದ್ರಾ ನದಿಯಲ್ಲಿ ನೀರು ಇಲ್ಲದೇ ಸಾರ್ವಜನಿಕರು ಪರದಾಡುವಂತಾಗಿದೆ. ಇದಕ್ಕಾಗಿ ನಗರಸಭೆ ಸದಸ್ಯರು ನಗರಸಭೆಯ ಮುಂದೆ ಖಾಲಿ ಕೊಡಗಳನ್ನು ಹಿಡಿ ದುಕೊಂಡು ಪ್ರತಿಭಟನೆ ಮಾಡಿ ನಗರದ ಜನತೆಗೆ ಸಮರ್ಪ ಕವಾಗಿ ನೀರು ಸರಬರಾಜು ಮಾಡುವಂತೆ ಹೋರಾಟದ ಹಾದಿಯಲ್ಲಿ ಸಾಗಿದೆ.

ನೀರಿನ ಸಮಸ್ಯೆ ಒಂದು ಕಡೆಯಾದರೆ, ಇತ್ತ ದೇವಸ್ಥಾನ ರಸ್ತೆಯ ಪೂಜಾ ಎಲೆಕ್ಟ್ರಾನಿಕ್ ಅಂಗಡಿ ಮುಂದೆ ಮತ್ತು ಇತರೆ ಮೂರು ಕಡೆಗಳಲ್ಲಿ ಬೋರ್‌ವೆಲ್ ಪೈಪ್ ಹೊಡೆದು, ರಸ್ತೆಯಲ್ಲಿ ನೀರು ಪೋಲಾಗಿ ರಸ್ತೆಯಲ್ಲಿ ವಾಹನ ಸವಾರರಿಗೆ ಮತ್ತು ಪಾದಚಾರಿ ಗಳಿಗೆ ತೊಂದರೆಯಾಗಿದೆ. ಕೆಲವು ನಿವಾಸಿಗಳು ಡ್ಯಾಮೇಜ್ ಆಗಿರುವ ಪೈಪ್‌ಗೆ ಇನ್ನೊಂದು ಪೈಪ್ ಅಳವ ಡಿಸಿಕೊಂಡು ನೀರು ತುಂಬಿಕೊಂ ಡು, ಅವರಿಗೆ ಸಾಕಾದ ನಂತರ ನೀರು ಚರಂಡಿಗೆ ಸೇರುತ್ತಿದೆ. 

ರಸ್ತೆಯಲ್ಲಿ ನೀರು ಹರಿಯತ್ತಿರುವುದನ್ನು ಸ್ಥಳೀಯ ನಿವಾಸಿಗಳು ವಾರ್ಡ್‌ನ ನಗರಸಭೆಯ ಸದಸ್ಯರ ಗಮನಕ್ಕೆ ತಂದಾಗ, ಆ ಸ್ಥಳ ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು, ಎರಡು ಕಡೆಯ ನಗರಸಭೆಯ ಸದಸ್ಯರು ಹೇಳಿದರು ಎಂದು ಸ್ಥಳೀಯ ನಿವಾಸಿ ಆನಂದ್ ಮೂರ್ಕಲ್ ಹೇಳಿದರು. 

ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಗಳು ಬರದಂತೆ ನೋಡಿಕೊಳ್ಳುವುದು ನಗರಸಭೆ ಅಧಿಕಾರಿಗಳ ಕರ್ತವ್ಯವಾಗಿದ್ದು, ಇಂತಹ ಸಮಸ್ಯೆಗಳು ಬಂದಾಗ ಡ್ಯಾಮೇಜ್ ಆಗಿರುವ ಪೈಪ್‌ ಗಳನ್ನು ನಗರಸಭೆ ಅಧಿಕಾರಿಗಳು ಆದಷ್ಟು ಬೇಗ ದುರಸ್ತಿ ಪಡಿಸಿ, ನೀರು ಚರಂಡಿಗೆ ಹರಿಯುವುದನ್ನು ತಪ್ಪಿಸುವ ಕಾರ್ಯವನ್ನು ನಿರ್ವಹಿಸಬೇಕಿದೆ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದರು. 

error: Content is protected !!