ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿಯಲ್ಲಿ ಸಂಭ್ರಮದ ರಥೋತ್ಸವ
ಹೊನ್ನಾಳಿ, ಮಾ. 22 – ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ, ಹಬ್ಬ-ಹರಿದಿನಗಳನ್ನು ಆಚರಿಸುತ್ತಾ ಬಂದಿರುವುದು ಗ್ರಾಮಗಳಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಎಂದು ಸಂಸದ ಜಿ.ಎಂ. ಸಿದ್ದೇಶ್ ತಿಳಿಸಿದರು
ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವದ ಪ್ರಯುಕ್ತ ಬಸವೇಶ್ವರ ದೇವಸ್ಥಾ ನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಯಾವುದೇ ಜಾತಿ-ಮತ, ಬೇಧ-ಭಾವ ಮಾಡದೇ ಸಡಗರ ಸಂಭ್ರಮದಿಂದ ಸರ್ವರೂ ತಮ್ಮ ಕೈಲಾದ ಸೇವೆ ಮಾಡುತ್ತಾ ಗ್ರಾಮಕ್ಕೆ ಆಗಮಿಸಿದ ಸರ್ವರ ಆತಿಥ್ಯ ಮಾಡುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರವೇ ಕಾಣಬಹುದಾಗಿದೆ ಎಂದರು.
ನಮ್ಮ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳನ್ನು ಇಂದಿಗೂ ಪಾಶ್ಚಿಮಾತ್ಯರು ಅನುಕರಣೆ ಮಾಡುತ್ತಿದ್ದು ಆದರೆ ನಮ್ಮ ಯುವ ಜನತೆಯು ಪಾಸ್ಚಿಮಾತ್ಯರ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಕಂಡು ಬರುತ್ತಿದೆ ಇದಕ್ಕೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.
ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ವತಿಯಿಂದ ಸಂಸದ ಜಿ.ಎಂ. ಸಿದ್ದೇಶ್ ಅವರನ್ನು ಸನ್ಮಾನಿಸಲಾಯಿತು.
ಸಂಭ್ರಮದ ರಥೋತ್ಸವ: ತರಗನಹಳ್ಳಿ ಗ್ರಾಮದಲ್ಲಿ ನಿನ್ನೆ ಶ್ರೀ ಬಸವೇಶ್ವರ ದೇವರ ರಥೋತ್ಸವ ಮತ್ತು ಸ್ವಾಮಿಯ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಸಂಜೆ ಶ್ರೀ ಬಸವೇಶ್ವರ ದೇವರ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿತು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ, ಬಿಜೆಪಿ ಮುಖಂಡರಾದ ಕೆ.ವಿ.ಚನ್ನಪ್ಪ, ಶಾಂತರಾಜ್ ಪಾಟೀಲ್ ಬಲಮುರಿ, ಪಟ್ಟಣಶೆಟ್ಟಿ ಪರಮೇಶಣ್ಣ, ಎಂ.ಆರ್.ಮಹೇಶ್, ಬಿದರಗಡ್ಡೆ ಚಂದ್ರಪ್ಪ, ಕಡೂರಪ್ಪ, ರಾಜಣ್ಣ, ಚನ್ನೇಶ್, ತಿಮ್ಮಲಾಪುರ ಗ್ರಾಪಂ ಅಧ್ಯಕ್ಷ ಟಿ.ಜಿ.ರಮೇಶ್ ಗೌಡ, ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿಯ ಗೌರವಾಧ್ಯಕ್ಷ ಎಸ್.ಜಿ.ಚಂದ್ರಪ್ಪ, ಅಧ್ಯಕ್ಷ ಹೊಳೆಬಸಪ್ಪ, ಕಾರ್ಯದರ್ಶಿ ಕೆ.ಸಿ.ಪ್ರಭಾಕರ್, ಖಜಾಂಚಿ ಟಿ.ಜಿ.ರಮೇಶ್ ಗೌಡ, ಸದಸ್ಯರಾದ ಎನ್, ಬಿ.ಮಂಜುನಾಥ್, ಬಿ.ಸಿ.ಮಹೇಶ್, ಎ.ಕೆ.ರಾಜು, ಬೋವಿರಾಜು, ಶಾಂತರಾಜ ಸ್ವಾಮಿ, ನಿಂಗಪ್ಪ, ಟಿ.ನಾಗರಾಜ ಮತ್ತು ಇತರರು ಉಪಸ್ಥಿತರಿದ್ದರು