ಜಿಗಳಿಯಲ್ಲಿ ನಾಳೆ ರಂಗನಾಥ ಸ್ವಾಮಿ ತೇರು : ಇಂದು ಕಂಕಣಧಾರಣೆ

ಜಿಗಳಿಯಲ್ಲಿ ನಾಳೆ ರಂಗನಾಥ ಸ್ವಾಮಿ ತೇರು : ಇಂದು ಕಂಕಣಧಾರಣೆ

ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವವು ನಾಳೆ ಶನಿವಾರ ಜರುಗಲಿದೆ.

ರಥೋತ್ಸವದ ಅಂಗವಾಗಿ ಇಂದು ರಾತ್ರಿ 8.30ಕ್ಕೆ ರಥಕ್ಕೆ ಕಂಕಣಧಾರಣೆ ಮಾಡಲಾಗುವುದು. ನಾಳೆ ಶನಿವಾರ ಬೆಳಿಗ್ಗೆ 8 ಕ್ಕೆ ಗಜ ಉತ್ಸವ, ಸಂಜೆ 4 ಗಂಟೆಯಿಂದ ಶಸ್ತ್ರ ಸೇವೆ ಸೇರಿದಂತೆ ಇತರೆ ಸೇವಾ ಕಾರ್ಯಕ್ರಮಗಳ ನಡೆಯಲಿದ್ದು, ಇದೇ ದಿನ ತಡರಾತ್ರಿ (ಭಾನುವಾರ ಬೆಳಗಿನ ಜಾವ) ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಶ್ರೀ ಬೀರಲಿಂಗೇಶ್ವರ ಮತ್ತು ಜಿ.ಬೇವಿನಹಳ್ಳಿ ಹಾಗೂ ಯಲವಟ್ಟಿ ಗ್ರಾಮಗಳ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಜೊತೆಗೂಡಿ ಸಕಲ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.

ದಿನಾಂಕ 24ರ ಭಾನುವಾರ ಬೆಳಗ್ಗೆ 10.30 ರಿಂದ ದೇವಸ್ಥಾನದಲ್ಲಿ ಜವಳ, ಮುದ್ರೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ಓಕುಳಿ ನಂತರ ಕಂಕಣ ವಿಸರ್ಜನೆ ನಡೆಯಲಿದೆ. ದಿನಾಂಕ 25ರ ಸೋಮವಾರ ಬೆಳಿಗ್ಗೆ ವಿವಿಧ ಕಾರ್ಯಕ್ರಮಗಳ ನಂತರ ಸಂಜೆ 7.30 ರಿಂದ ಶ್ರೀ ರಂಗನಾಥಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಮತ್ತು ಜಿ.ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಸಮ್ಮುಖದಲ್ಲಿ ಭೂತಗಳ ಸೇವೆ ನಡೆಯಲಿದ್ದು, ನಂತರ ರಾಜಬೀದಿಗಳಲ್ಲಿ ದೇವರುಗಳ ಉತ್ಸವ ಜರುಗಲಿದೆ.

ದಿನಾಂಕ 26ರ ಮಂಗಳವಾರ ಶ್ರೀ ಚೌಡೇಶ್ವರಿ ದೇವಿ ಹಬ್ಬ ನಡೆಯಲಿದೆ ಎಂದು ಗ್ರಾಮದ ಗೌಡ್ರ ಬಸವರಾಜಪ್ಪ ತಿಳಿಸಿದ್ದಾರೆ.

error: Content is protected !!