ಹೊನ್ನಾಳಿಯಲ್ಲಿ ಇಂದಿನಿಂದ 3 ದಿನ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ

ಹೊನ್ನಾಳಿ, ಮಾ. 7 – ಈಶ್ವರೀಯ ವಿಶ್ವವಿದ್ಯಾಲಯದಿಂದ ಹೊನ್ನಾಳಿ ಪಟ್ಟಣದ ನೀಲಕಂಠೇಶ್ವರ ದೇವಾಲಯದಲ್ಲಿ ನಾಳೆ ದಿನಾಂಕ 8ರ ಶುಕ್ರವಾರ ದಿಂದ ಇದೇ ದಿನಾಂಕ 10ರ ಭಾನುವಾರದವರೆಗೆ ಮೂರು ದಿನಗಳು ದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಏರ್ಪಡಿಸಲಾಗಿದೆ ಎಂದು ವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಜ್ಯೋತಿ ತಿಳಿಸಿದರು.

ನಾಡಿದ್ದು ದಿನಾಂಕ 9ರ ಶನಿವಾರ ಸಂಜೆ 6ಕ್ಕೆ ಅಸತೋಮ ಸದ್ಗಮಯ ಅಧ್ಯಾತ್ಮಿಕ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮಾ. 10ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಶಿವರಾತ್ರಿ ಪ್ರಯುಕ್ತ ಮಹಿಳಾ ದಿನಾಚರಣೆ ನಡೆಯಲಿದ್ದು, ಹಿರೇಕಲ್ಮಠದ ಡಾ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ಶಾಂತನಗೌಡರು ಸಮಾರಂಭ ಉದ್ಘಾಟಿಸಲಿದ್ದು ಅತಿಥಿಗಳಾಗಿ ರೇಣುಕಾಚಾರ್ಯ ಕೆಂಚಪ್ಪ, ಜ್ಯೋತಿ, ನಾಗೇಂದ್ರ, ಮತ್ತಿತರರು ಭಾಗವಹಿಸಲಿದ್ದಾರೆ. ಮೌಲ್ಯಯುಕ್ತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯವಾಗಿ ಶಿರಸಿಯ ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾಜಿ ಅವರಿಂದ ಉಪನ್ಯಾಸ ನಡೆಯಲಿದೆ.

error: Content is protected !!