ಕೊಡದಗುಡ್ಡದಲ್ಲಿ 14 ರಂದು ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮ ಸಭೆ

ಕೊಡದಗುಡ್ಡದಲ್ಲಿ 14 ರಂದು  ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮ ಸಭೆ

ಜಗಳೂರು, ಮಾ. 7 – ತಾಲ್ಲೂಕಿನ ಪ್ರಸಿದ್ಧ ಕೊಡದಗುಡ್ಡ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಇದೇ ದಿನಾಂಕ 14ರಂದು ನೂತನವಾಗಿ ನಿರ್ಮಿಸಿರುವ ವಸತಿ ಗೃಹಗಳ ಉದ್ಘಾಟನೆ, ಕರಿಗಲ್ಲು ಸ್ಥಾಪನೆ, ಕಲ್ಯಾಣ ಮಂಟಪಕ್ಕೆ ಶಂಕು ಸ್ಥಾಪನೆ ಹಾಗೂ ಅಡ್ಡ ಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮಸಭೆ ನಡೆಯಲಿದೆ ಎಂದು ತಪೋ ಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ವೀರಭದ್ರೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ  ಶ್ರೀಗಳು ಮಾತನಾಡಿದರು.

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಮತ್ತು ಕೇದಾರ ರಾಜ ಗುರುವರ್ಯ ಭೀಮಾ ಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಅಂದು ಬೆಳಗ್ಗೆ ಒಂಬತ್ತು ಗಂಟೆಗೆ ದೇವಿಕೆರೆ ಗ್ರಾಮದಲ್ಲಿ ಮಹಾದ್ವಾರ ಉದ್ಘಾಟನೆ ನೆರವೇರಿಸುವರು.

ಬೆಳಿಗ್ಗೆ 9.30ಕ್ಕೆ ಬಸವಾಪುರದಲ್ಲಿ ಅಡ್ಡ ಪಲ್ಲಕ್ಕಿ ಮೆರವಣಿಗೆ ಮೂಲಕ ಕೊಡದಗುಡ್ಡ ಗ್ರಾಮಕ್ಕೆ ಆಗಮಿಸಿ ಕರಿಗಲ್ಲಿಗೆ ಅಕ್ಷತೆ ,ಯಾತ್ರಿ ನಿವಾಸ್ ಉದ್ಘಾಟನೆ ಹಾಗೂ ಕಲ್ಯಾಣ ಮಂಟಪಕ್ಕೆ ಶಂಕು ಸ್ಥಾಪನೆ ನೆರವೇರುವುದು. ನಂತರ ಇತರೆ ವೇದಿಕೆ ಕಾರ್ಯಕ್ರಮಗಳು ಹಾಗೂ ಶ್ರೀಗಳಿಂದ ಆಶೀರ್ವಾದ ಸಂದೇಶ ಇರುತ್ತದೆ.

ಈ ಸಂದರ್ಭದಲ್ಲಿ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಿಎಸ್ ಮಲ್ಲಿಕಾರ್ಜುನ್‌ ,ಉಪಾಧ್ಯಕ್ಷ ಎಂ.ವಿ. ಚೆನ್ನಯ್ಯ, ಕಾರ್ಯದರ್ಶಿ ಗೌಡ್ರು ಡಿ.ಸಿ ರುದ್ರಸ್ವಾಮಿ. ಪದಾಧಿಕಾರಿಗಳಾದ ಎಂ.ಪಿ. ಶಿವಕುಮಾರ ಸ್ವಾಮಿ, ಕೆ.ಆರ್. ಚಂದ್ರಶೇಖರ್ ,ಕೆ.ವಿ. ವಿರೂಪಾಕ್ಷಪ್ಪ , ಟಿ. ಕಲ್ಲಪ್ಪ, ಡಿ.ಎಸ್. ಮಲ್ಲಿಕಾರ್ಜುನ, ವಿಎಸ್ಎಸ್ಎನ್ ಅಧ್ಯಕ್ಷ ರವಿಚಂದ್ರ ಬಸಾಪುರ ಮುಂತಾದವರು ಉಪಸ್ಥಿತರಿದ್ದರು.

error: Content is protected !!