ಪ್ರೇಕ್ಷಕರ ಗಮನ ಸೆಳೆದ ಶ್ರೀ ಚಕ್ರ ಮಹಿಮೆ ರೂಪಕ

ಪ್ರೇಕ್ಷಕರ ಗಮನ ಸೆಳೆದ  ಶ್ರೀ ಚಕ್ರ ಮಹಿಮೆ ರೂಪಕ

ದಾವಣಗೆರೆ ವರ್ತುಲ ರಸ್ತೆಯಲ್ಲಿರುವ ಶ್ರೀ ಶಾರದಾಂಬ ದೇವಿ ದೇವಸ್ಥಾನದ  ವಾರ್ಷಿಕೋತ್ಸವದ ಅಂಗವಾಗಿ `ಶ್ರೀಚಕ್ರ ಮಹಿಮೆ’  ರೂಪಕವನ್ನು ಹರಿಹರದ ಶ್ರೀ ಫಲ್ಗುಣಿ ಕಲಾತಂಡ ನಡೆಸಿಕೊಟ್ಟಿತು. ಈ ರೂಪಕವನ್ನು ನಿರ್ದೇಶಿಸಿದವರು ಶ್ರೀಮತಿ ಚಂದ್ರಲಾ ಎಸ್. ನಾಯಕ್.

ಗಮಕ ಕಲಾವಿದರಾಗಿರುವ ಶ್ರೀಮತಿ ಚಂದ್ರಲಾ ಎಸ್.ನಾಯಕ್ ಮತ್ತು ಅವರ ಮಗಳಾದ ಉಮಾ ಭಟ್ ಅವರು, ಶ್ರೀಮತಿ ಚಂದ್ರಲಾ ಅವರು ಬರೆದಿರುವಂತಹ ರೂಪಕವನ್ನು ಸುಶ್ರಾವ್ಯವಾಗಿ ವಾಚನ ಮಾಡಿದರು. ಅದಕ್ಕೆ ತಕ್ಕಂತೆ ಆ ತಂಡದ ಪಾತ್ರಧಾರಿಗಳು ಅಭಿನಯ ಮಾಡಿ, ದೇವಿಯ ಚರಿತ್ರೆಯನ್ನು ಕಣ್ಣ ಮುಂದೆ ತಂದಿಟ್ಟರು.

ಶ್ರೀ ಶಂಕರಾಚಾರ್ಯರು ತಾಮಸ ರೂಪಿಣಿಯಾಗಿದ್ದ ಮೀನಾಕ್ಷಿ ದೇವಿಯನ್ನು, ಸಾತ್ವಿಕ ರೂಪಿಣಿಯಾಗಿ ಮಾಡಿದಂತಹ ಈ ಸುಂದರ ಕಥೆಯನ್ನು ಬಹಳ ಸುಂದರವಾಗಿ ಅಭಿನಯಿಸಿ, ಹಾಡಿನ ರೂಪಕದ ಮೂಲಕ ಎಲ್ಲರಿಗೂ ಅವರ ಮಹಿಮೆ ತಿಳಿಯುವಂತೆ ಮಾಡಿದರು.

ಪಗಡೆ ಆಡುವ ನೆಪದಲ್ಲಿ ಶಂಕರಾಚಾರ್ಯರು ತಾಯಿ ಮೀನಾಕ್ಷಿ ದೇವಿಯ ಶ್ರೀಚಕ್ರದಲ್ಲಿನ ಬೀಜಾಕ್ಷರಗಳನ್ನು ಬದಲಾಯಿಸಿ, ಆಕೆಯನ್ನು ಶ್ರೀಚಕ್ರದಲ್ಲಿ ನೆಲೆಸುವಂತೆ ಮಾಡಿದರು. ಇದರಿಂದಾಗಿ ತಾಮತ ರೂಪಿಣಿಯಾಗಿ ಪ್ರತಿದಿನ ಪ್ರಾಣಿಗಳ ಹತ್ಯೆ ಮಾಡುತ್ತಿದ್ದ ದೇವಿಯು ಸಾತ್ವಿಕ ರೂಪಣೆಯಾಗಿ ಗುಡಾನ್ನ, ಮೊಸರನ್ನ ನೈವೇದ್ಯ ಸ್ವೀಕರಿಸುವಂತೆ ಮಾಡಿದರು. ಪಾಂಡ್ಯರಾಜನು ರಾತ್ರಿ ದೇವಸ್ಥಾನಕ್ಕೆ ಹೋದ ಪುಟ್ಟ ಬಾಲ ಸನ್ಯಾಸಿ ಬೆಳಗಾದರೂ ಬರಲಿಲ್ಲ, ಏನಾಯಿತೋ ಎಂದು ಗಾಬರಿಯಿಂದ ಬಂದನು. ಅಲ್ಲಿ ತಾಯಿಯ ಬದಲಾದ ರೂಪ ಕಂಡು ಧನ್ಯನಾದನು, ಶಂಕರಾಚಾರ್ಯರಿಗೆ ಧನ್ಯವಾದ ಅರ್ಪಿಸಿದನು.

ಈ ರೂಪಕದ ನಂತರ ಶ್ರೀ ಚಕ್ರದ ಆವರಣಗಳ ಬಗ್ಗೆ ಅದರ ಮಹತ್ವ ಎಲ್ಲವನ್ನೂ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟದ್ದು ಎಲ್ಲರಿಗೂ ಅವರ ಮಹಾತ್ಮೆ ತಿಳಿಯಿತು. ವಾಚನ ಮಾಡಿದವರ ಧ್ವನಿ ಸೊಗಸಾಗಿತ್ತು. ಕೋಪ, ಆವೇಶ, ಸಮಾಧಾನ ಎಲ್ಲವನ್ನೂ ಅಭಿವ್ಯಕ್ತ ಮಾಡಬೇಕು. ಅದನ್ನೆಲ್ಲಾ ಮಾಡಿ  ಕಾರ್ಯಕ್ರಮ ಜನಮನ ಸೆಳೆದು ಆ ದೇವಿಗೆ ಅರ್ಪಣೆ ಆಗುವಂತೆ  ಮಾಡಿದರು.

– ಶ್ರೀ ಕೃಷ್ಣಾರ್ಪಣಮಸ್ತು

ರೂಪಶ್ರೀ ಶಶಿಕಾಂತ್

error: Content is protected !!