ರಂಭಾಪುರಿ ಜಗದ್ಗುರುಗಳ ಮಾರ್ಚ್‌ ಮಾಹೆಯ ಪ್ರವಾಸ

ರಂಭಾಪುರಿ ಜಗದ್ಗುರುಗಳ ಮಾರ್ಚ್‌ ಮಾಹೆಯ ಪ್ರವಾಸ

ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು 2024, ಮಾರ್ಚ್ ಮಾಹೆಯಲ್ಲಿ ಕೈಗೊಂಡಿರುವ ಪ್ರವಾಸದ ವಿವರ :

ದಿನಾಂಕ 2 ರಂದು ಸವದತ್ತಿ ತಾಲ್ಲೂಕು ಹೂಲಿ ಸಾಂಬಯ್ಯನವರ ಮಠದಲ್ಲಿ ಲಿಂ. ಶ್ರೀ ಸಂಗಮೇಶ್ವರ ಅಜ್ಜನವರ ಲಿಂಗಾಂಗ ಸಾಮರಸ್ಯ ಸಮಾರಂಭ, 4ರಂದು ಹುಬ್ಬಳ್ಳಿ ತಾಲ್ಲೂಕು ಹಳ್ಳಿಯಾಳದಲ್ಲಿ ಶ್ರೀ ನಂದಿಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದ ಸಾನ್ನಿಧ್ಯ ವಹಿಸುವರು. 

ದಿನಾಂಕ 5ರಂದು ಹರಿಹರ ತಾಲ್ಲೂಕು, ಮಲೇಬೆನ್ನೂರು ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಇಷ್ಟಲಿಂಗ ಮಹಾಪೂಜಾ ಸಮಾರಂಭ, 6 ಮತ್ತು 7ರಂದು ಮುದ್ದೇಬಿಹಾಳ ತಾಲ್ಲೂಕು ಕುಂಟೋಜಿಯಲ್ಲಿ ಪುರ ಪ್ರವೇಶ ಮತ್ತು ಹಿರೇಮಠದ ನೂತನ ಶ್ರೀಗಳವರ ಗುರು ಪಟ್ಟಾಧಿಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವರು. 

ದಿನಾಂಕ 8ರಂದು ಬೆಳಿಗ್ಗೆ 9.30ಕ್ಕೆ ವಿಜಯಪುರ ಜಿಲ್ಲೆ ಹೊರ್ತಿ ಕ್ಷೇತ್ರದಲ್ಲಿ ಇಷ್ಟಲಿಂಗ ಮಹಾಪೂಜಾ-ಸಮಾರಂಭ, ಸಂಜೆ 6ಕ್ಕೆ ದಕ್ಷಿಣ ಸೊಲ್ಲಾಪುರ ತಾಲ್ಲೂಕು ಮಾಳಕವಠೆ ಗ್ರಾಮದಲ್ಲಿ ಉತ್ಸವ ಮತ್ತು ಮಹಾಶಿವರಾತ್ರಿ ಸಮಾರಂಭ. 

9ರಂದು ಆಳಂದ ತಾಲ್ಲೂಕು ಚಲಗೇರಾದಲ್ಲಿ ಧರ್ಮ ಜಾಗೃತಿ ಸಮಾರಂಭ, 10ರಂದು ಲಕ್ಷ್ಮೇಶ್ವರ ತಾಲ್ಲೂಕು ಮುಕ್ತಿಮಂದಿರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ 14ರಂದು ಜಗಳೂರು ತಾಲ್ಲೂಕು ಕೊಡದಗುಡ್ಡ ಕ್ಷೇತ್ರದಲ್ಲಿ ಯಾತ್ರಿ ನಿವಾಸ ಉದ್ಘಾಟನೆ ಮಾಡುವರು. 

ದಿನಾಂಕ 20ರಿಂದ 26ರ ವರೆಗೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದಲ್ಲಿ ಶ್ರೀ ಜಗದ್ಗುರು ರೇಣು ಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವದ ಅಂಗವಾಗಿ ವಿವಿಧ ಧರ್ಮ ಸಮಾರಂಭಗಳ ಸಾನ್ನಿಧ್ಯ ವಹಿಸುವರು. 

ದಿನಾಂಕ 29ರಂದು ಸಕಲೇಶಪುರ ತಾಲ್ಲೂಕು ಎಸಳೂರಿನಲ್ಲಿ ಲಿಂ. ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳ ಪುಣ್ಯ ಸ್ಮರಣೋತ್ಸವ ಹಾಗೂ ಇಷ್ಟಲಿಂಗ ಮಹಾಪೂಜೆ 30ರಂದು ಸೊರಬ ತಾಲ್ಲೂಕು ದುಗ್ಲಿಯಲ್ಲಿ ಜಾತ್ರಾ ಮಹೋತ್ಸವ ಸಮಾರಂಭ ಹಾಗೂ 31ರಂದು ಸೊರಬ ತಾಲ್ಲೂಕು ಶಾಂತಪುರ ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸುವರು. 

ಆಸಕ್ತರು ಶ್ರೀ ರಂಭಾಪುರಿ ಜಗದ್ಗುರುಗಳವರ ಕಾರ್ಯಕ್ರಮಗಳ ಲಾಭವನ್ನು ಪಡೆಯಬೇಕಾಗಿ ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.

error: Content is protected !!