ಎಐಡಿಎಸ್‌ಓ ದಿಂದ ಚಂದ್ರಶೇಖರ್ ಆಜಾದ್‌ರ ಹುತಾತ್ಮ ದಿನಾಚರಣೆ

ಎಐಡಿಎಸ್‌ಓ ದಿಂದ ಚಂದ್ರಶೇಖರ್ ಆಜಾದ್‌ರ ಹುತಾತ್ಮ ದಿನಾಚರಣೆ

ದಾವಣಗೆರೆ, ಫೆ. 29- ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಸ್ವಾತಂತ್ರ್ಯ ಸಂಗ್ರಾಮದ ರಾಜೀ ರಹಿತ ಕ್ರಾಂತಿಕಾರಿ ಹೋರಾಟಗಾರರಾದ ಚಂದ್ರಶೇಖರ್ ಆಜಾದ್  ಅವರ ಹುತಾತ್ಮ ದಿನವನ್ನು ನಗರದ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.

ಚಂದ್ರಶೇಖರ್ ಆಜಾದ್ ಅವರು ತನ್ನ 14 ನೇ ವಯಸ್ಸಿನಲ್ಲಿಯೇ ಭಾರತ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸಲು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಸ್ವತಂತ್ರ ಭಾರತದ ಕನಸಿನೊಂದಿಗೆ ಅವರ ವಿರುದ್ಧ ಹೋರಾಡುತ್ತಲೇ  1931 ಫೆ. 27 ರಂದು ತನ್ನ 24 ನೇ ವಯಸ್ಸಿನಲ್ಲಿಯೇ ಹುತಾತ್ಮರಾದರು.

ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಯುವ ಕ್ರಾಂತಿಕಾರಿಯ ಜೀವನ ಹೋರಾಟದ ಸ್ಫೂರ್ತಿಯು ಇಂದಿಗೂ ಅಜರಾಮರ. ಅವರ ತ್ಯಾಗ ಬಲಿದಾನ ಮತ್ತು ವಿಚಾರಗಳನ್ನು ಜನ ಸಾಮಾನ್ಯರ , ವಿದ್ಯಾರ್ಥಿಗಳ ನಡುವೆ ಹರಡುವ ಮಹಾನ್ ಉದ್ದೇಶದಿಂದ ದಾವಣಗೆರೆ ಜಿಲ್ಲೆಯಾದ್ಯಂತ ಅವರ ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಸುಮನ್ ತಿಳಿಸಿದರು.

error: Content is protected !!