ವಿಕಸಿತ್ ಭಾರತ್ -2047 ರಾಜ್ಯಮಟ್ಟದ ಸ್ಪರ್ಧೆ; ನಿಭಾ ನಾಜ್ ಗೆ ದ್ವಿತೀಯ ಸ್ಥಾನ

ವಿಕಸಿತ್ ಭಾರತ್ -2047 ರಾಜ್ಯಮಟ್ಟದ ಸ್ಪರ್ಧೆ; ನಿಭಾ ನಾಜ್ ಗೆ ದ್ವಿತೀಯ ಸ್ಥಾನ

ದಾವಣಗೆರೆ, ಫೆ. 29 – ನೆಹರು ಯುವ ಕೇಂದ್ರ ಹಾಗೂ ಕೇಂದ್ರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನಡೆಸಲಾದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ವಿಕಸಿತ್ ಭಾರತ್ -2047 ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ನಗರದ ಶಿವನಗರದ ನಿಭಾ ನಾಜ್ ಅವರು ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ವಸಂತ್ ನಗರದಲ್ಲಿನ ನೆಹರು ಯುವ ಕೇಂದ್ರದ ನಿರ್ದೇಶಕರ ಕಚೇರಿಯಲ್ಲಿ  ಬುಧವಾರ ರಾಜ್ಯ ಮಟ್ಟದ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಪಡೆದ ನಿಭಾ ನಾಜ್ ಅವರು 50 ಸಾವಿರ ರೂ. ನಗದು ಬಹುಮಾನವನ್ನೂ ಪಡೆದಿದ್ದು, ಪಾರ್ಲಿಮೆಂಟ್‌ನ ಸೆಂಟ್ರಲ್ ಹಾಲ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇಗ್ನೋದಲ್ಲಿ ಎಂ. ಎ. ವ್ಯಾಸಂಗ ಮಾಡುತ್ತಿರುವ ನಿಭಾ ನಾಜ್ ಅವರು ನಗರ ಮಟ್ಟ, ಜಿಲ್ಲಾ ಮಟ್ಟದಲ್ಲಿಯೂ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದಿದ್ದರು. ಈ ಸ್ಪರ್ಧೆಯಲ್ಲಿ ಜಿಲ್ಲೆಯ 48 ಮಂದಿ ಪಾಲ್ಗೊಂಡಿದ್ದರು.  ನಿಭಾ ನಾಜ್‌ ದಾವಣಗೆರೆಯ ಶಿವನಗರದ ನವೀದ್ ಬಾಷಾ ಮತ್ತು ಜಮೀರಾ ದಂಪತಿ ಪುತ್ರಿಯಾಗಿದ್ದಾರೆ.

error: Content is protected !!