ನ್ಯಾಮತಿ, ಫೆ.6- ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕು ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ತಮ್ಮ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ, ಮಂಗಳ ವಾರ ತಹಶೀಲ್ದಾರ್ ಪಟ್ಟರಾಜ ಗೌಡರಿಗೆ ಮನವಿ ಅರ್ಪಿಸಿದರು.
ಒಕ್ಕೂಟದ ರಾಜ್ಯ ಸಹ ಕಾರ್ಯ ದರ್ಶಿ ರೇಖಾ ಆರ್. ಲೋಕೇಶ್ ಮಾತನಾಡಿ, ನಾಳೆ ದಿನಾಂಕ 8ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಕಾರ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ನಕ್ಷೆ, ಗ್ರಾಮ ಸಭೆಗಳಿಗೆ ನಿಯಮಗಳ ರಚನೆ, ಬಾಪೂಜಿ ಸೇವಾ ಕೇಂದ್ರಕ್ಕೆ ಬಲವರ್ಧನೆ, ಅಧಿಕಾರ ವಿಕೇಂದ್ರೀಕರಣ ಕಾಯ್ದೆ ರಚನೆ ಕಚೇರಿ ನಿರ್ವಹಣಾ ಕೈಪಿಡಿ ರಚನೆ ಈ ಸ್ವತ್ತು ದಾಖಲೆ ಸೃಜನೆ ಮಾಡಿ ಹಂಚುವುದು, ಕೇರಳ ಮಾದರಿಯ ಗೌರವ ಧನ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿರುವ ತೊಡಕುಗಳ ನಿವಾರಣೆ ಸೇರಿದಂತೆ 28 ಬೇಡಿಕೆಗ ಳನ್ನು ಸರ್ಕಾರದ ಮುಂದಿಟ್ಟು, ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಒಕ್ಕೂಟದ ಅಧ್ಯಕ್ಷರಾದ ಶ್ವೇತ ಬಸವರಾಜ್ ಬೆಳಗುತ್ತಿ, ಉಪಾಧ್ಯಕ್ಷ ನಾಗರಾಜ್, ಸುರವೊನ್ನೇ ಪಂಚಾಯಿತಿ ಅಧ್ಯಕ್ಷ ಯೋಗೇಶ್, ಮಲ್ಲಮ್ಮ ಚಿನ್ನಿಕಟ್ಟಿ, ಲಕ್ಷ್ಮಿ ಮಂಜುನಾಥ್, ರೇವತಿ ಪರಮೇಶ್ವರಪ್ಪ, ಚಟ್ನಹಳ್ಳಿ ಗೀತಾ ರಂಗಪ್ಪ, ವೀರೇಶ್ ಯರಗನಾಳ, ಅಧ್ಯಕ್ಷರಾದ ಸವಿತಾ ಹನುಮಂತಪ್ಪ, ಕುಂಕೋವ ಶ್ರುತಿ ರುದ್ರೇಶ್ ಇನ್ನಿತರರು ಇದ್ದರು.