ದಾವಣಗೆರೆ, ಫೆ. 6- ಶಿವ ಎಜುಕೇಷನಲ್ ಅಸೋ ಸಿಯೇಷನ್ ಅಡಿಯಲ್ಲಿ ನಡೆಯುತ್ತಿರುವ `ಸೋಫ್ರಸೈನ್ ಕಾನ್ಸೆಪ್ಟ್ ಸ್ಕೂಲ್’ ವಾರ್ಷಿಕೋತ್ಸವವನ್ನು ನಾಳೆ ದಿನಾಂಕ 7 ರಂದು ಸಂಜೆ 6 ಗಂಟೆಗೆ ತಾಲ್ಲೂಕಿನ ಆರನೇ ಮೈಲಿಕಲ್ಲು (ತರಳಬಾಳು ನಗರ) ಇಲ್ಲಿ ಶಾಲಾ ಆವ ರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಕಾರ್ಯ ದರ್ಶಿ ಎಲ್. ಜಗದೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಶಾಲೆಯ ಆಡಳಿತಾಧಿಕಾರಿ ಟಿ.ಎನ್. ಶಿವಯೋಗಿ, ಪ್ರಾಚಾರ್ಯ ಹೆಚ್.ಎಸ್. ಭರತ್ ಮತ್ತಿತರರು ಭಾಗವಹಿಸಲಿದ್ದಾರೆ.
ಕಾರ್ಯದರ್ಶಿ ಎಲ್. ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂತೋಷ್, ಸುಧಾಕರ್, ಮೊಹಮ್ಮದ್ ಅತೀಕ್ ಉಪಸ್ಥಿತರಿದ್ದರು.