ರಾಣೇಬೆನ್ನೂರು, ಫೆ.5- ಇಲ್ಲಿನ ಕಾಕಿ ಜನಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೆಸಿಐ ಮತ್ತು ಸೌರಭ ಜಾನಪದ ವೇದಿಕೆ ಸಂಯುಕ್ತವಾಗಿ ದೊಡ್ಡ ನಾಗಪ್ಪ ಕಾಕಿ, ಸಣ್ಣ ನಾಗಪ್ಪ ಕಾಕಿ ಪುಣ್ಯಸ್ಮರಣೆಗಾಗಿ ಇದೇ ದಿನಾಂಕ 11ರಂದು ರಾಜ್ಯಮಟ್ಟದ ಜನಪದ ಉತ್ಸವ ಏರ್ಪಡಿಸಿರುವುದಾಗಿ ಸಂಘಟಕ ಶ್ರೀ ನಿವಾಸ ಕಾಕಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ಜೆಸಿ ವಾಣಿ ಅರಮನೆ ಭೂಮಿ ಪೂಜೆ ನಂತರ ನೀಲ ಕಂಠೇಶ್ವರ ದೇವಸ್ಥಾನದ ಗಣೇಶ ಅರಮನೆಯಲ್ಲಿ ರಕ್ತದಾನದ ಜೊತೆಗೆ ದೇಹದಾನದ ಅರಿವು ಮೂಡಿಸುವ ಕಾರ್ಯಕ್ರಮ ನಂತರ ನಡೆಯುವ ಜಾನಪದ ಉತ್ಸವದಲ್ಲಿ ಜೋಗತಿ ನೃತ್ಯ, ಬಂಜಾರ ನೃತ್ಯ, ಡೊಳ್ಳು, ಸಮಾಳ ತಂಡಗಳು ಭಾಗವಹಿಸಲಿವೆ ಎಂದು ಅವರು ತಿಳಿಸಿದ್ದಾರೆ.