ಜಿಗಳಿ ರಂಗನಾಥ್‌ಗೆ `ಕನಕ ಚೇತನಶ್ರೀ’ ಪ್ರಶಸ್ತಿ ಪ್ರದಾನ

ಜಿಗಳಿ ರಂಗನಾಥ್‌ಗೆ  `ಕನಕ ಚೇತನಶ್ರೀ’ ಪ್ರಶಸ್ತಿ ಪ್ರದಾನ

ಮಲೇಬೆನ್ನೂರು, ಫೆ. 5- ಶಿವಮೊಗ್ಗದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯು 26 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ 536 ನೇ ಶ್ರೀ ಕನಕದಾಸರ ಜಯಂತಿಯ ಅಂಗವಾಗಿ ಸಮಾಜ ಸೇವೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನಿಯ ಸೇವೆ ಸಲ್ಲಿಸಿದ ಸಾಧಕರ ಸೇವೆಯನ್ನು ಗುರುತಿಸಿ ಕೊಡುವ, `ಕನಕಶ್ರೀ ಚೇತನ ಪತಂಜಲಿ ರತ್ನ’ ರಾಜ್ಯ ಪ್ರಶಸ್ತಿಯನ್ನು ಬೀದಿ ನಾಟಕ ಕಲಾವಿದ ಜಿಗಳಿಯ ಡಿ. ರಂಗನಾಥ್ ಅವರಿಗೆ ಶಿವಮೊಗ್ಗದ ಪತಂಜಲಿ ಯೋಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಎಂ. ಈಶ್ವರಪ್ಪ ನವಲೆ, ಡಾ. ಪಿ. ಬಾಲಪ್ಪ, ಪರಿಸರ ರಮೇಶ್, ಜೆ.ಸಿ.ನಾರಾಯಣ ಮೂರ್ತಿ, ಪತಂಜಲಿಯ ನಾಗರಾಜ್ ಈ ವೇಳೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚನ್ನಗಿರಿಯ ಸುವರ್ಣ ಕರ್ನಾಟಕ ಜನ ಜಾಗೃತಿ ಕಲಾ ತಂಡದ ಕಲಾವಿದರು  ಉಪಸ್ಥಿತರಿದ್ದು, ರಂಗನಾಥ್ ಅವರನ್ನು ಅಭಿನಂದಿಸಿದರು.

error: Content is protected !!