ದಾವಣಗೆರೆ: ತಾಲ್ಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಇಂದು ಮಂಗಳವಾರ ಬೆಳಿಗ್ಗೆ ಶ್ರೀ ಉಡುಸಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಯ ಪೂಜೆ ಮತ್ತು ಸಾಯಂಕಾಲ ಶ್ರೀ ದೇವಿಯ ಅಲಂಕಾರ ನಡೆಯಲಿದೆ. ನಾಳೆ ಬುಧವಾರ ಪದ್ಧತಿಯಂತೆ ಬೆಳಗಿನ ಜಾವ 4 ಗಂಟೆಗೆ ಘಟ್ಟಿ ಗಡಿಗೆ ಮತ್ತು ಹಿಟ್ಟಿನಿಂದ ಮಾಡಿದ ಕೋಣವನ್ನು ಉತ್ಸವದ ಮಂಟಪಕ್ಕೆ ಕರೆ ತಂದು ವಧೆ ಮಾಡಿ, ಚರಗ ಚೆಲ್ಲುವುದರ ಮೂಲಕ ಸಂಭ್ರಮದಿಂದ ಜಾತ್ರೆ ನಡೆಯಲಿದೆ.
January 10, 2025