ವೀರ ಮಾಹೇಶ್ವರ ಸೊಸೈಟಿಯ ಎಲ್ಲ ನಿರ್ದೇಶಕರು ಅನರ್ಹ : ವಿಶೇಷಾಧಿಕಾರಿ ನೇಮಕಕ್ಕೆ ಆದೇಶ

ದಾವಣಗೆರೆ, ಜ.23- ನಗರದ ಶ್ರೀ ವೀರ ಮಾಹೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶ ಕರುಗಳನ್ನು ಅನರ್ಹಗೊಳಿಸಿರುವ ಸಹಕಾರ ಸಂಘಗಳ ಉಪನಿಬಂಧಕರು, ಸಂಘಕ್ಕ ವಿಶೇಷ ಅಧಿ ಕಾರಿಯನ್ನು ನೇಮಕ ಮಾಡಲು ಆದೇಶಿಸಿರುತ್ತಾರೆ.

ಸಂಘದಲ್ಲಿ ರಾಜೀನಾಮೆಯಿಂದ ತೆರವಾದ ಮೂವರು ನಿರ್ದೇಶಕರ ಸ್ಥಾನಗಳನ್ನು ಕಾನೂನು ಬಾಹಿರವಾಗಿ ಸೇರ್ಪಡೆ ಮಾಡಿಕೊಂಡಿರುವು ದರಿಂದ ಹಾಗೂ 1.3.2020ರಂದು ಜರುಗಿದ ಸಂಘದ ಸಾಮಾನ್ಯ ಚುನಾವಣಾ ಸಂದರ್ಭದಲ್ಲಿ ಖಾಲಿ ಇರುವ 4 ನಿರ್ದೇಶಕರ ಸ್ಥಾನಗಳನ್ನು ಸೇರಿ ಒಟ್ಟು 7 ಸ್ಥಾನಗಳನ್ನು ಸಹಕಾರ ಸಂಘ ಕಾಯ್ದೆ ಕಲಂ 29 (ಇ) ರನ್ವಯ ಚುನಾವಣೆ ಮೂಲಕ ಕ್ರಮವಿಡದೇ ಇರುವುದರಿಂದ ಎಲ್ಲ ನಿರ್ದೇಶಕರಗಳನ್ನು ಅನರ್ಹಗೊಳಿಸಲಾಗಿದೆ ಎಂದು ಉಪ ನಿಬಂಧಕರು ತಮ್ಮ  ಆದೇಶದಲ್ಲಿ ಹೇಳಿದ್ದಾರೆ. ಈ ಆದೇಶವನ್ನು ಜ.19ರಂದು ಹೊರಡಿಸಿದ್ದಾರೆ. ನಿರ್ದೇಶಕರ ಸ್ಥಾನಗಳನ್ನು ಕಾನೂನು ಬಾಹಿರವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಘಕ್ಕೆ ಚುನಾವಣೆಯ ಮೂಲಕವೇ ನಿರ್ದೇಶಕರ ಆಯ್ಕೆ ಆಗಬೇಕು ಎಂದು ಅರ್ಜಿದಾರರಾದ ಕೆ.ಎಂ. ಬಸವರಾಜ ಮತ್ತು ಎಂ.ಎಚ್. ಶಿವಯೋಗಿಶ್ವರ ಸ್ವಾಮಿ ಮತ್ತಿತರರು ಸೊಸೈಟಿ ಅಧ್ಯಕ್ಷ ವೀರಭದ್ರಸ್ವಾಮಿ ಮತ್ತು ಎಲ್ಲ ನಿರ್ದೇಶಕರ ವಿರುದ್ದ ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು.

error: Content is protected !!