ಜಿ.ಬಿ. ವಿನಯ್ ಕುಮಾರ್
ನ್ಯಾಮತಿ, ಜ. 5 – ಕೇವಲ ಟಿಕೆಟ್ ಆಕಾಂಕ್ಷಿಯಾಗಿ ಅಲ್ಲ, ಒಬ್ಬ ಆಕಾಂಕ್ಷಿಯಾಗಿ ಜನಗಳ ನಡುವೆ ಬೆರೆತು ಅವರೊಂದಿಗೆ ಸಮಾಲೋಚನೆ ಮಾಡುವುದರಿಂದ ಅವರ ಮನದಿಂಗಿತವನ್ನು ಅರಿಯುವ ಉದ್ದೇಶದಿಂದ ನಾನು ಪಾದಯಾತ್ರೆ ಮಾಡುತ್ತಿರುವುದು ಎಂದು ಕಾಂಗ್ರೆಸ್ ಮುಖಂಡ ಜಿ.ಬಿ. ವಿನಯ್‍ಕುಮಾರ್ ಹೇಳಿದರು.
ನ್ಯಾಮತಿ ತಾಲ್ಲೂಕಿನ ಕೋಡಿಕೊಪ್ಪ ಗ್ರಾಮದಲ್ಲಿ 16 ದಿನದ ವಿನಯ ನಡಿಗೆ ಹಳ್ಳಿಯ ಕಡೆಗೆ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.
ಪಾದಯಾತ್ರೆ ಮೂಲಕ ಕ್ಷೇತ್ರದ ಪರಿಚಯ ಹಾಗೂ ರೈತರ, ಜನ ಸಾಮಾನ್ಯರ, ಮಹಿಳೆಯರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಅದರೆ ಇಲ್ಲಿನ ಸಂಸದರು ಹಳ್ಳಿಯ ಭಾಗಕ್ಕೆ ಬಂದಿಲ್ಲ. ಅವರ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ.
ಚುನಾವಣೆಯ ಸಂದರ್ಭದಲ್ಲಿ ಮಾತ್ರ ಗ್ರಾಮೀಣ ಭಾಗಕ್ಕೆ ಮಾತ್ರ ಬರುತ್ತಾರೆ ನಿಮ್ಮಂತಹ ಯುವಕರು ರಾಜಕೀಯಕ್ಕೆ ಬರಬೇಕು ಕ್ಷೇತ್ರದಲ್ಲಿ ಬದಲಾವಣೆ ಆಗಬೇಕು ಕ್ಷೇತ್ರದಲ್ಲಿ
ಹಿರಿಯರು ಹೇಳುತ್ತಿದ್ದು ಇದರಿಂದ ನಮಗೆ ಉತ್ಸಾಹ ಹೆಚ್ಚಿಸುವಂತೆ ಮಾಡಿದೆ ಟಿಕೆಟ್ ಆಕಾಂಕ್ಷಿಯಾದರೆ ಸಾಲದು, ಗ್ರಾಮಾಂತರ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳಿಗೆ ಪರಿಹಾರ ದೊರಕಿಸಿಕೊಡುವ, ಜನ ಸಾಮಾನ್ಯರ ಧ್ವನಿಯಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು ಸಲಹೆ, ಸೂಚನೆಗಳನ್ನು ಕೊಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.
ಸಾರ್ವಜನಿಕರಿಂದ ಭವ್ಯ ಸ್ವಾಗತ ಸಿಕ್ಕಿದ್ದು ನಾಳೆ ನ್ಯಾಮತಿ ತಾಲ್ಲೂಕಿನಲ್ಲಿ ಪ್ರವಾಸ ಮುಂದುವರಿಸಲಿದ್ದು, ಚನ್ನಗಿರಿ ತಾಲ್ಲೂಕು ಹಾಲೇಶಪುರ ಗ್ರಾಮದಿಂದ ಶನಿವಾರದಿಂದ ಐದು ದಿನಗಳ ಪ್ರವಾಸ, ಮಾಯಕೊಂಡ ನಾಲ್ಕು ದಿನಗಳ ಪಾದಯಾತ್ರೆ, ಗ್ರಾಮ ವಾಸ್ತವ ಮಾಡುವುದಾಗಿ ಹೇಳಿದರು.
ಪಾದಯಾತ್ರೆಯಲ್ಲಿ ಕೋಡಿಕೊಪ್ಪ ಜಿ.ಶಿವಪ್ಪ, ಯೋಗೇಶಪ್ಪ, ಪ್ರವೀಣ್, ಲೋಕೇಶ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಪ್ಪಿನಕಟ್ಟೆ ರಂಜಿತ್, ಅಪ್ಪಿನಕಟ್ಟೆ ಶ್ರೀಧರ್, ಡಿಸ್. ಕರಿಬಸಪ್ಪ, ಸೇರಿದಂತೆ ಇನ್ನಿತರರು ಇದ್ದರು.