ಪಾಲಿಕೆ ವಲಯ ಕಚೇರಿ ಸಮಸ್ಯೆ ಬಗೆಹರಿಸಲು ಆಗ್ರಹ

ಪಾಲಿಕೆ ವಲಯ ಕಚೇರಿ ಸಮಸ್ಯೆ ಬಗೆಹರಿಸಲು ಆಗ್ರಹ

ದಾವಣಗೆರೆ,ಡಿ.13- ಮಹಾನಗರ ಪಾಲಿಕೆಯ ವಲಯ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿ ರುವ ತೊಂದರೆ ಮತ್ತು ಅನಗತ್ಯ ಅಲೆದಾಟವನ್ನು ತಪ್ಪಿಸುವಂತೆ ಪಾಲಿಕೆ ವಿರೋಧ ಪಕ್ಷದ ನಾಯಕ  ಕೆ. ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.

ಪ್ರಸನ್ನಕುಮಾರ್   ನೇತೃತ್ವದಲ್ಲಿ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಕೆ.ಎಂ ವೀರೇಶ್, ವೀಣಾ ನಂಜಪ್ಪ, ಮುಖಂಡರಾದ ಕುಂಬಾರ್ ನಾಗಪ್ಪ ಸೇರಿ ,  ಮಹಾಪೌರ ವಿನಾಯಕ ಪೈಲ್ವಾನ್  ಹಾಗೂ ಪಾಲಿಕೆಯ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ  ಉದಯ  ಕುಮಾರ್   ಅವರಿಗೆ ಮನವಿ ಸಲ್ಲಿಸಲಾಯಿತು.

ಹೊಸದಾಗಿ ವಲಯ  ಕಛೇರಿ-2    ಲೋಕಿಕೆರೆ ರಸ್ತೆಯಲ್ಲಿರುವ ಟಿ.ವಿ. ಸ್ಟೇಷನ್ ಎದುರಿನ ಕಟ್ಟಡಕ್ಕೆ   ಸ್ಥಳಾಂತರಿಸುವುದರಿಂದ   ಬಸಾಪುರ,  ಆವರಗೆರೆ ಮತ್ತು ಡಿ.ಸಿ.ಎಂ.ನಲ್ಲಿ ವಾಸಿಸುವ ಜನರಿಗಂತೂ ದೂರವಾಗುತ್ತದೆ. ಸಂಬಂಧಿಸಿದ ಕಂದಾಯ ಕಛೇರಿಯನ್ನು ಈ ಹಿಂದೆ ನಿರ್ವಹಿಸಿದಂತೆ ಮುಖ್ಯ  ಕಛೇರಿಯಲ್ಲಿಯೇ ನಿರ್ವಹಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು. 

ಎಸ್.ಓ.ಜಿ. ಕಾಲೋನಿ, ರಾಮನಗರ, ಬನಶಂಕರಿ ಬಡಾವಣೆ, ವಿದ್ಯಾನಗರ, ತರಳ ಬಾಳು ಬಡಾವಣೆಗಳಲ್ಲಿ ವಾಸಿಸುವ ಜನರಿಗೆ ವಲಯ  ಕಛೇರಿ-2 ಹತ್ತಿರವಿರುವುದರಿಂದ ಸದರಿ ವಾರ್ಡ್‌ಗಳನ್ನು ವಲಯ ಕಛೇರಿ-3 ರಿಂದ  ತೆಗೆದು  2ರಲ್ಲಿ  ಸೇರಿಸಬೇಕು. 

ಸಾರ್ವಜನಿಕರು ಖಾತೆ ಬದಲಾವಣೆ,  ಕಂದಾಯ ಪಾವತಿ,  ಅರ್ಜಿ ಶುಲ್ಕ ಸೇರಿದಂತೆ   ಶುಲ್ಕಗಳನ್ನು ಪಾವತಿಸಲು ಸಂಬಂಧಿಸಿದ ವಲಯ  ಕಛೇರಿಯಲ್ಲೇ ಪಡೆಯಬೇಕು. ನಂತರ ಅದನ್ನು ಪಾವತಿಸಲು ಪುನಃ ಮುಖ್ಯ ಕಛೇರಿಗೆ  ಬಂದು ಪಾವತಿಸಿದ ಚಲನ್ ಪ್ರತಿಯನ್ನು ವಾಪಸ್ ವಲಯ ಕಛೇರಿಯಲ್ಲಿಯೇ  ನೀಡಬೇಕು. ಇದರಿಂದ ಸಾರ್ವಜನಿಕರಿಗೆ ಕಾಲ ವ್ಯರ್ಥವಾಗುವುದರ ಜೊತೆಗೆ  ರೂ.100 ಗಳ ಶುಲ್ಕ ತುಂಬಲು 2-3 ಬಾರಿ ಸಂಚರಿ ಸಬೇಕಾದ  ಅನಿವಾರ್ಯತೆ   ಸೃಷ್ಟಿಯಾಗಿದೆ. ಕಾರಣ ಪ್ರತಿ ವಲಯ ಕಛೇರಿಯಲ್ಲಿ    ಶುಲ್ಕ ಪಾವತಿಸಲು ಕೌಂಟರ್ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. 

ಇ-ಆಸ್ತಿ ಯೋಜನೆ ಜಾರಿಯಾಗಿದ್ದು, ಸಾರ್ವಜನಿಕರಿಗೆ ದಾಖಲೆಗಳ  ಪರಿಶೀಲನೆಗೆ ವ್ಯರ್ಥವಾಗುತ್ತಿದ್ದ ಸಮಯ ಉಳಿತಾಯವಾಗಿ ನಾಗರಿಕರಿಗೆ ತ್ವರಿತವಾಗಿ  ಖಾತಾ ನಕಲು ನೀಡುವ ಮಹತ್ವಾಕಾಂಕ್ಷಿ ಯೋಜನೆ ಇಂದು ಮಾರಕ ವಾಗಿ ಪರಿಗಣಿಸಿದೆ. ಕಂದಾಯ ದಾಖಲೆಗಳ ಡಿಜಿಟಲೀಕರಣದ ಮುಖ್ಯ ಉದ್ದೇಶ ಕ್ಷಣ  ಮಾತ್ರದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಆಸ್ತಿಯ ಅಧಿಕೃತತೆಯನ್ನು ಖಚಿತಪಡಿಸಿ,  ಸಾರ್ವಜನಿಕರು ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಖಾತಾ ನಕಲು ಪಡೆಯುವುದರ  ಬದಲಾಗಿ ಹಲವು ದಿನಗಳು, ಇನ್ನೂ ಕೆಲವೊಮ್ಮೆ ತಿಂಗಳುಗಳಾದರೂ ಖಾತೆ ನಕಲು ಸಿಕ್ಕಿಲ್ಲವೆಂದು ಅಸಮಾಧಾನ ಸಾರ್ವಜನಿಕರ ಲ್ಲಿದೆ. ಖಾತೆ ಬದಲಾವಣೆ ಅರ್ಜಿ ಸಲ್ಲಿಸುವ  ಸಂದರ್ಭದಲ್ಲಿ ದಾಖಲೆಗಳನ್ನು ಪಡೆಯುವ ನಂತರದಲ್ಲಿ ಅನಗತ್ಯ ವಿಳಂಬವಾಗುತ್ತಿರು ವುದನ್ನು  ಜರೂರಾಗಿ ಪರಿಗಣಿಸಿ ಅರ್ಜಿ ಸಲ್ಲಿಸಿದ 48 ಗಂಟೆಗಳಲ್ಲಿ ಖಾತಾ ನಕಲು ನೀಡಲು ಮತ್ತು 31 ರಿಂದ 40 ದಿನಗಳೊಳಗಾಗಿ ಖಾತೆ  ಬದಲಾವಣೆ ಮಾಡಿಕೊಡಲು, ಇನ್ನೊಂದು ವಾರದಲ್ಲಿ ಕ್ರಮ ಕೈಗೊಳ್ಳದೇ ಹೋದಲ್ಲಿ ಪ್ರತಿಭಟನೆ ಮಾಡುವುದಾಗಿ  ಪ್ರಸನ್ನಕುಮಾರ್ ಎಚ್ಚರಿಸಿದ್ದಾರೆ.

error: Content is protected !!