ಮಹಿಳಾ – ಮಕ್ಕಳ ಅಭಿವೃದ್ದಿ ಇಲಾಖೆ ಯೋಜನೆಗಳ ಸೌಲಭ್ಯ ಮಧ್ಯವರ್ತಿಗಳಿಂದ ದುರುಪಯೋಗ

ದಾವಣಗೆರೆ, ಡಿ. 13 – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಟಾನ ಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಮಧ್ಯವರ್ತಿಗಳು ದುರುಪ ಯೋಗ ಪಡಿಸಿಕೊಳ್ಳುತ್ತಿದ್ದು, ಈ ಕುರಿತು ಸಾರ್ವ ಜನಿಕರು ಎಚ್ಚೆತ್ತುಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ. ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಆನ್‍ಲೈನ್ ಅಥವಾ ಭೌತಿಕವಾಗಿ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರು ನೇರವಾಗಿ ಇಲಾಖೆಯ ಜಿಲ್ಲಾ ಕಛೇರಿ ಅಥವಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ತೆರಳಿ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಥವಾ ಅಧಿಕಾರಿಗಳ ಹೆಸರಿನಲ್ಲಿ ಮಧ್ಯವರ್ತಿಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದರೆ ಪೊಲೀಸ್ ಠಾಣೆ ಜಿಲ್ಲಾ ಕಛೇರಿ ದೂ.ಸಂ. 08192-264056 ಹಾಗೂ ಸಿ.ಡಿ.ಪಿ.ಓ. ಕಛೇರಿ ದೂ.ಸಂ. ದಾವಣಗೆರೆ – 9945767687, ಜಗಳೂರು-99015 21555, ಹರಿಹರ-78292 82991, ಹೊನ್ನಾಳಿ-70221 05100, ಚನ್ನಗಿರಿ-94490 80657 ಗೆ ಕರೆ ಮಾಡಿ ದೂರು ನೀಡಲು ಅವರು ತಿಳಿಸಿದ್ದಾರೆ.

error: Content is protected !!