ಪಿಎಸ್ಐ ಗೀತಾಂಜಲಿ ಸಿಂಧೆ
ಕೊಟ್ಟೂರು, ಡಿ. 10 – ಮಕ್ಕಳು ಆಟಗಳಲ್ಲಿ ಭಾಗವಹಿಸುವುದರಿಂದ ಸ್ಪರ್ಧೆಗಳ ಬಗ್ಗೆ ಜ್ಞಾನ ಮೂಡುತ್ತದೆ ಎಂದು ಕೊಟ್ಟೂರು ಪೊಲೀಸ್ ಠಾಣ ಪಿಎಸ್ಐ ಕು. ಗೀತಾಂಜಲಿ ಸಿಂಧೆ ಅಭಿಪ್ರಾಯಪಟ್ಟರು.
ಇಲ್ಲಿನ ಇಂದು ಸಿ.ಬಿ.ಎಸ್.ಇ. ಶಾಲೆಯಲ್ಲಿ ನಿನ್ನೆ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಶಾಲೆಯ ಆಡಳಿತಾಧಿಕಾರಿ ಹೆಚ್.ಎನ್. ವೀರಭದ್ರಪ್ಪ ಮಾತನಾಡಿ, ಮಕ್ಕಳ ಯಶಸ್ಸನ್ನು ಅಳೆಯುವ ಪೋಷಕರ ಮಾನದಂಡ ಬದಲಾಗಬೇಕು. ಕ್ರೀಡೆಯಲ್ಲಿ ಮಕ್ಕಳು ಪಾಲ್ಗೊಳ್ಳಲು ಬೆಂಬಲ ನೀಡಬೇಕು ಎಂದು ತಿಳಿಸಿದರು.
ಶಾಲಾ ಪ್ರಾಂಶುಪಾಲ ಎ. ಚೇತನ್ ಕುಮಾರ್, ಮುಖ್ಯಗುರುಗಳಾದ ಬಿ. ಬಸವರಾಜ, ಪದವಿ ಪ್ರಾಂಶುಪಾಲ ಡಾ. ಪಿ.ಎಂ. ವಾಗೀಶಯ್ಯ, ಪಿ.ಯು ಕಾಲೇಜಿನ ಪ್ರಾಂಶುಪಾಲರು ಪವನ್ ಕುಮಾರ್ ಹೆಚ್. ಉಪಸ್ಥಿತರಿದ್ದರು. ಶಿಕ್ಷಕಿ ಬಿ.ವಿ. ಪ್ರೇಮ ನಿರೂಪಿಸಿದರು, ವಾಣಿ ಡಿ.ಬಿ. ಸ್ವಾಗತಿಸಿದರು. ವಿಜಯಲಕ್ಷ್ಮಿ ವಂದಿಸಿದರು.