ದಾವಣಗೆರೆ, ಡಿ. 5- ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 67ನೇ ಮಹಾಪರಿನಿರ್ವಾಣದ ಪ್ರಯುಕ್ತ ಅಸ್ಪೃಶ್ಯತಾ ನಿವಾರಣೆಗಾಗಿ ಹಮ್ಮಿಕೊಂಡಿರುವ ಅಂಬೇಡ್ಕರ್ ಜ್ಯೋತಿ ಯಾತ್ರೆ ಇಂದು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೊಡಲಾಯಿತು.
ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಜ್ಯೋತಿ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಕಳಕಳಿಯುಳ್ಳವರು, ತಳ ಸಮುದಾಯದವರ ಸಮಸ್ಯೆಗಳನ್ನು ಅರಿತು ಅವರ ಅಭಿವೃದ್ಧಿಗೆ ಶ್ರಮಿಸುವವರು, ಅಂಬೇಡ್ಕರ್ ಚಿಂತನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಂಸತ್ ಸದಸ್ಯರು ಕಾರ್ಯೋನ್ಮುಖರಾಗಬೇಕಾಗಿದೆ ಎಂದರು.
ನಾಗಪುರ್ ದೀಕ್ಷಾ ಭೂಮಿ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದು, ಈ ವೇಳೆ ದಲಿತ ಮುಖಂಡರಾದ ಸಿ. ಬಸವರಾಜ್, ಹೆಗ್ಗೆೇರೆ ರಂಗಪ್ಪ, ಆಲೂರು ನಿಂಗರಾಜ್, ಬಿ.ಆರ್. ಮಂಜುನಾಥ್, ಬಿ. ಮಂಜುನಾಥ್, ವಿಜಯ ಪುಟಗನಾಳ್, ಕೊಪ್ಪಳ ಮಂಜುನಾಥ, ಹೇಮಂತ ಚನ್ನಗಿರಿ, ರಮೇಶ್ ಹೊನ್ನಾಳಿ, ಪ್ರಶಾಂತ ಆನಗೋಡು, ಸದಾನಂದ ಚಿಕ್ಕನಹಳ್ಳಿ, ಲಿಂಗರಾಜ್ ಶಿರಮಗೊಂಡನಹಳ್ಳಿ, ರುದ್ರಪ್ಪ, ಸೋಮಲಾಪುರ ಹನುಮಂತಪ್ಪ, ಹನುಮಂತ, ನಾಗರಾಜ್ ಬಸಾಪುರ ಮತ್ತಿತರರು ಭಾಗವಹಿಸಿದ್ದರು.