ದಾವಣಗೆರೆ, ಡಿ.5- ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಎಂ.ಸಿ.ಸಿ. ಬಡಾವಣೆ ಶಾಖೆಯ ಅಧ್ಯಕ್ಷರಾಗಿ ಶ್ರೀಮತಿ ಪ್ರಭಾ ರವೀಂದ್ರ ಅವಿರೋಧವಾಗಿ ಪುನರಾಯ್ಕೆ ಯಾಗಿದ್ದಾರೆ ಎಂದು ಕಲಾಕುಂಚ ಮಹಿಳಾ ವಿಭಾಗದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ ತಿಳಿಸಿದ್ದಾರೆ.
ಎಂ.ಸಿ.ಸಿ. `ಎ’ ಬ್ಲಾಕ್ ಶ್ರೇಯಸ್ ಸಭಾಂಗಣದಲ್ಲಿ ಇತ್ತೀಚಿಗೆ ಸೇರಿದ್ದ ಸರ್ವ ಸದಸ್ಯರ ಮಹಾಸಭೆಯಲ್ಲಿ 2023-25ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವ ಅಧ್ಯಕ್ಷರಾಗಿ ಶ್ರೀಮತಿ ಶ್ರೀಮತಿ ಚಂದ್ರಶೇಖರ ಅಡಿಗ, ಪ್ರಧಾನ ಕಾರ್ಯದರ್ಶಿಯಾಗಿ ಮಮತ ಕೊಟ್ರೇಶ್, ಖಜಾಂಚಿಯಾಗಿ ಶ್ರೀಮತಿ ಗೀತಾ ಬದರಿನಾಥ್, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಶೈಲಾ ವಿನೋದ ದೇವರಾಜ್, ಸಂಚಾಲಕರಾಗಿ ಶ್ರೀಮತಿ ಗಂಗಾಂಬಿಕಾ ರಾಜೇಶ್ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಚಂದ್ರಶೇಖರ್ ಅಡಿಗ ಪ್ರಾರ್ಥಿಸಿದರು. ಶ್ರೀಮತಿ ಶೈಲಾ ವಿನೋದ ದೇವರಾಜ್ ಸ್ವಾಗತಿಸಿದರು. ಶ್ರೀಮತಿ ಗಂಗಾಂಬಿಕಾ ರಾಜೇಶ್ ವಂದಿಸಿದರು.