ದಾವಣಗೆರೆ,ಡಿ.4- ನಗರದ ಎಂ.ಸಿ.ಸಿ. ಎ ಬ್ಲಾಕ್ನಲ್ಲಿ ರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಇದೇ ದಿನಾಂಕ 7ರ ಗುರುವಾರ ಸಂಜೆ 6 ಗಂಟೆಗೆ ಕಾರ್ತಿಕೋತ್ಸವ ನಡೆಯಲಿ ದೆ ಎಂದು ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ತಿಳಿಸಿದ್ದಾರೆ. ಕಾರ್ತಿಕೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ 6 ಕ್ಕೆ ಕಾಕಡಾರತಿ, ಬೆಳಿಗ್ಗೆ 8ಕ್ಕೆ ಆರತಿ, ಬೆಳಿಗ್ಗೆ 8.30ರಿಂದ ಲಲಿತ ಸಹಸ್ರ ನಾಮಾ ವಳಿ, ವಿಷ್ಣು ಸಹಸ್ರ ನಾಮಾವಳಿ, ಬೆಳಿಗ್ಗೆ 10.30ರಿಂದ ಸಾಯಿ ಭಜನಾಮೃತ – ಶ್ರೀ ಶಿರಡಿ ಸಾಯಿಬಾಬಾ ಭಜನಾ ಮಂಡಳಿಯಿಂದ ಸಾಯಿ ಭಜನೆ, ಮಧ್ಯಾಹ್ನ 12ಕ್ಕೆ ಆರತಿ, ಪ್ರಸಾದ ಕಾರ್ಯಕ್ರಮ, ಸಂಜೆ 6 ಗಂಟೆಗೆ ದೂಪಾರತಿ, ಪ್ರಸಾದ ವಿನಿಯೋಗ, ದುನಿ ಪೂಜೆ, ರಾತ್ರಿ 9ಕ್ಕೆ ಶೇಜಾರತಿ ಕಾರ್ಯಕ್ರಮಗಳು ಜರುಗಲಿವೆ. ಶ್ರೀ ಸಾಯಿ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಕಾರ್ಯಾಧ್ಯಕ್ಷ ಎಸ್.ಎಸ್. ಗಣೇಶ್, ಉಪಾಧ್ಯಕ್ಷ ಅಥಣಿ ವೀರಣ್ಣ ಸೇರಿದಂತೆ ಗಣ್ಯರು ಈ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರುವರು.
January 15, 2025