ನಗರದ ಶ್ರೀ ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿಂದು ಜ್ಞಾನಯಜ್ಞ ಸಪ್ತಾಹ

ಎಸ್.ಎಸ್.ಲೇ-ಔಟ್ `ಬಿ’ ಬ್ಲಾಕ್, ರಿಂಗ್‌ ರಸ್ತೆಯಲ್ಲಿರುವ ಶ್ರೀ  ಸ.ಸ. ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿ  ಶ್ರೀ ಗೌರಮ್ಮಾಜಿ ಮಹಾರಾಜರ 28ನೇ ಜ್ಞಾನಯಜ್ಞ ಸಪ್ತಾಹ ಮತ್ತು ಕಾರ್ತಿಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಇಂದು ಮಾತೋಶ್ರೀಯವರ ಕರ್ತ ಗದ್ದುಗೆಗೆ ಮಹಾಭಿಷೇಕ ನೆರವೇರುವುದು. ಬೆಳಿಗ್ಗೆ 10 ಗಂಟೆಯಿಂದ ವೀಣಾ ಸ್ಥಾಪನೆಯೊಂದಿಗೆ ಸಪ್ತಾಹ ಪ್ರಾರಂಭವಾಗುತ್ತದೆ. ದಾಸಭೋದ ಗ್ರಂಥ ಪಠಣ, ಭಜನೆ ನಂತರ ಸಂಜೆ ಸಂಕೀರ್ತನೆ ನಡೆಯಲಿದೆ.

ನಾಳೆ ಬುಧವಾರ ಬೆಳಿಗ್ಗೆ ಕಾಕಡಾರತಿ, ಪೂಜೆ, ಭಜನೆ ನಂತರ ಸಂಜೆ 4 ಗಂಟೆಯಿಂದ ಪೂಜ್ಯ ಮಾತೋಶ್ರಿ ಗೌರಮ್ಮಾಜಿ ಉತ್ಸವ ಭಾವಚಿತ್ರದ ಅಲಂಕೃತ  ಪಾಲಕಿಯ ಮೆರವಣಿಗೆ ಜರುಗಲಿದೆ. ರಾತ್ರಿ 10 ಗಂಟೆಗೆ ಕಾರ್ತಿಕ ದೀಪಗಳನ್ನು ಬೆಳಗಿಸಿ, ಜಾಗರಣೆ ಆಚರಿಸಲಾಗುವುದು.

7ರಂದು ಬೆಳಗಿನ ಪೂಜಾದಿ ಕಾರ್ಯಕ್ರಮಗಳ ನಂತರ ಮಧ್ಯಾಹ್ನ  12 ಗಂಟೆಗೆ  ಮಾತೋಶ್ರೀಯವರ `ಪುಣ್ಯಸ್ಮರಣೆ’ ಮತ್ತು ಪುಷ್ಪವೃಷ್ಟಿಗೈಯ್ಯವ ಕಾರ್ಯಕ್ರಮವಿದೆ.

error: Content is protected !!